»   » ಅಮಿತಾಭ್‌ ಬಚ್ಚನ್‌ ಕುರ್ಚಿಯಲ್ಲಿ ಶಾರುಖ್‌ ಖಾನ್‌!

ಅಮಿತಾಭ್‌ ಬಚ್ಚನ್‌ ಕುರ್ಚಿಯಲ್ಲಿ ಶಾರುಖ್‌ ಖಾನ್‌!

Subscribe to Filmibeat Kannada


ಮುಂಬೈ : ಅಮಿತಾಭ್‌ ಬಚ್ಚನ್‌ ನಡೆಸಿಕೊಡುತ್ತಿದ್ದ ‘ಕೌನ್‌ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮವನ್ನು, ಶಾರುಖ್‌ ಖಾನ್‌ ನಡೆಸಿಕೊಟ್ಟರೆ ಹೇಗೆ? ಅದು ವೀಕ್ಷಕರ ಪಾಲಿಗೆ ಇನ್ನೊಂದು ಹಬ್ಬ. ಇಂತಹದೊಂದು ಪ್ರಯತ್ನಕ್ಕೆ ಸ್ಟಾರ್‌ಪ್ಲಸ್‌ ಟೀವಿ ಚಾನೆಲ್‌ ಕೈ ಹಾಕಿದೆ.

ಮತ್ತೆ ಕೌನ್‌ ಬರೇಗಾ ಕರೋಡ್‌ ಪತಿ ಕಾರ್ಯಕ್ರಮ ಆರಂಭಗೊಳ್ಳುತ್ತಿದ್ದು, ಕಾರ್ಯಕ್ರಮ ನಿರೂಪಣೆಗೆ ಶಾರುಖ್‌ ಸಮ್ಮತಿಸಿದ್ದಾರೆ ಎಂದು ಸ್ಟಾರ್‌ ಟೀವಿಯ ಸಿಇಒ ಸಮೀರ್‌ ನಾಯರ್‌ ತಿಳಿಸಿದ್ದಾರೆ.

ಅನಾರೋಗ್ಯದ ಕಾರಣ ಅಮಿತಾಭ್‌, ಕರೋಡ್‌ ಪತಿ ಜವಾಬ್ದಾರಿಯನ್ನು ಬೇಡ ಎಂದರು. ಶಾರುಖ್‌ ನೇತೃತ್ವದಲ್ಲಿ ಕರೋಡ್‌ ಪತಿ ಚಿತ್ರೀಕರಣ ಡಿಸೆಂಬರ್‌ನಲ್ಲಿ ಆರಂಭಗೊಳ್ಳಲಿದೆ. ಜನವರಿಯಿಂದ ವೀಕ್ಷಕರು ಕರೋಡ್‌ ಪತಿ ಕಾರ್ಯಕ್ರಮವನ್ನು ವೀಕ್ಷಿಸಬಹುದು ಎಂದು ಮೂಲಗಳು ತಿಳಿಸಿವೆ.

ಅಮಿತಾಭ್‌ಗೆ ಸ್ಪರ್ಧೆ ನೀಡುವಂತೆ, ಬೆಳ್ಳೆತೆರೆಯನ್ನು ಆಕ್ರಮಿಸಿಕೊಂಡ ಶಾರುಖ್‌, ಈಗ ಕಿರುತೆರೆಗೂ ನುಗ್ಗಿದ್ದಾರೆ.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada