»   » ಮಂಗಳವಾರ ನಟ ಸಂಜಯ ದತ್‌ ಹಣೆಬರಹ ನಿರ್ಧಾರ?

ಮಂಗಳವಾರ ನಟ ಸಂಜಯ ದತ್‌ ಹಣೆಬರಹ ನಿರ್ಧಾರ?

Subscribe to Filmibeat Kannada


ಮುಂಬಯಿ : 1993ರ ಮುಂಬೈ ಸರಣಿ ಬಾಂಬ್‌ ಸ್ಫೋಟದ ವಿಚಾರಣೆ ನಡೆಸುತ್ತಿರುವ ಟಾಡಾ ನ್ಯಾಯಾಲಯ, ಪ್ರಕರಣದ ಆರೋಪಿ ಮತ್ತು ನಟ ಸಂಜಯ ದತ್‌ ಸಹಾಯಕ ಸೈಯದ್‌ ಮಂಜೂರ್‌ ಅಹಮದ್‌ರನ್ನು ದೋಷಿಯೆಂದು ಸೋಮವಾರ ಘೋಷಿಸಿದೆ.

ಸಂಜಯ ದತ್‌ ಪ್ರಕರಣದ ವಿಚಾರಣೆ ಮಂಗಳವಾರ ನಡೆಯಲಿದ್ದು, ಅವರ ಭವಿಷ್ಯ ನಿರ್ಧಾರವಾಗಲಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಂಜಯ್‌ದತ್‌ಗೆ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.

ಭೂಗತ ದೊರೆ ಅಬು ಸಲೇಂ ಸೂಚನೆ ಮೇರೆಗೆ ದತ್‌ ಸಹಾಯಕ ಮಂಜೂರ್‌, ಎ.ಕೆ.56 ರೈಫಲ್‌ ಅನ್ನು ಸಂಜಯ್‌ ದತ್‌ ನಿವಾಸದಿಂದ ಸಾಗಿಸಿದ ಎನ್ನುವ ಆರೋಪಗಳಿದ್ದವು. ಟಾಡಾ ನ್ಯಾಯಾಲಯದ ನ್ಯಾಯಾಧೀಶ ಪಿ.ಡಿ.ಕೋಡೆ ದತ್‌ ಸಹಾಯಕನ ಜೊತೆಗೆ, ಇಬ್ಬರು ಸುಂಕದ ಅಧಿಕಾರಿಗಳಾದ ಆರ್‌.ಕೆ. ಸಿಂಗ್‌ ಮತ್ತು ಸುಲ್ದಾನ್‌ ಸೈಯ್ಯದ್‌ ಅವರನ್ನು ದೋಷಿಗಳು ಎಂದು ಪ್ರಕಟಿಸಿದೆ.

(ಏಜನ್ಸೀಸ್‌)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada