»   » ರಕ್ಷಿತಾಗೆ ಕನ್ನಡದ ನಟರ ಪೈಕಿ ಇಷ್ಟವಾಗಿರೋದು ಸುದೀಪ್‌ ಮಾತ್ರವೇ?

ರಕ್ಷಿತಾಗೆ ಕನ್ನಡದ ನಟರ ಪೈಕಿ ಇಷ್ಟವಾಗಿರೋದು ಸುದೀಪ್‌ ಮಾತ್ರವೇ?

Posted By: Staff
Subscribe to Filmibeat Kannada
rakshita
ಉದಯೋನ್ಮುಖ ನಾಯಕಿ ರಕ್ಷಿತಾಳ ಮೆಚ್ಚಿನ ನಾಯಕ ಯಾರು?
ಆಕೆಯ ಬೆಡ್‌ ರೂಮನ್ನೊಮ್ಮೆ ನೋಡಿ ಬಂದರೆ ಈ ಪ್ರಶ್ನೆಗೆ ಉತ್ತರ ಸಿಕ್ಕೀತು. ಅಷ್ಟೇ ಅಲ್ಲ, ರಕ್ಷಿತಾ ಕನಸಿನ ಪುರುಷ ಹೇಗಿರಬೇಕು ಎಂಬುದರ ಎಳೆಯೂ ಗೊತ್ತಾದೀತು.

ಕಾಲೇಜು ಮೆಟ್ಟಿಲು ಹತ್ತಿ, ಸಿಕ್ಕಾಪಟ್ಟೆ ಹಿಂದಿ ಸಿನಿಮಾ ನೋಡುವ ಜಾಯಮಾನದ ಷೋಡಶಿಯ ಮನಸ್ಥಿತಿಗೂ ರಕ್ಷಿತಾ ಟೇಸ್ಟಿಗೂ ಪಕ್ಕಾ ತಾಳೆಯಾಗುತ್ತದೆ. ರಕ್ಷಿತಾ ರೂಮಿನ ದೊಡ್ಡ ವಾರ್ಡ್‌ರೋಬಿನ ಮೇಲೆಲ್ಲಾ ಕಟ್ಟುಮಸ್ತು ಹುಡುಗರ ಫೋಟೋಗಳು. ಈ ಪೈಕಿ ಸಲ್ಮಾನ್‌ ಖಾನ್‌ಗೇ ಹೆಚ್ಚು ಜಾಗ ಮೀಸಲು. ಸಲ್ಮಾನ್‌ ಅಂದರೆ ರಕ್ಷಿತಾಗೆ ಪ್ರಾಣವಂತೆ. ಈತ ಜೈಲಿಗೆ ಹೋಗಿ ಬಂದ ನಂತರವೂ ಈತನ ಮೇಲೆ ರಕ್ಷಿತಾ ಇಟ್ಟಿರುವ ಅಭಿಮಾನ ಎಳ್ಳಷ್ಟೂ ಕಡಿಮೆಯಾಗಿಲ್ಲ. ಹಾಗೇ ಕಣ್ಣಾಡಿಸಿದರೆ, ಸಂಜಯ್‌ ದತ್‌ನ ಪುಟ್ಟ ಫೋಟೋ. ಅದರ ಬಗಲಿಗೇ ಹಾಲಿವುಡ್‌ನ ಮೊರದಗಲ ಎದೆಯಿರುವ ಪುರುಷ ಸಿಂಹಗಳ ಚಿತ್ರ. ಮುದ್ದಿಗೆ ಇರಲಿ ಎಂಬಂತೆ ಟೈಟಾನಿಕ್‌ ಚಿತ್ರದ ನಾಯಕ ಲಿಯೋನಾರ್ಡೋ ಡಿ ಕಾರ್ಪೋ ಬ್ಲೋ ಅಪ್‌.

ಮೊದಲು ಇದೇನು ಹುಚ್ಚಮ್ಮಾ ಅಂದ ಅಪ್ಪ- ಅಮ್ಮ ಆಮೇಲೆ ಮಗಳ ಪೋಸ್ಟರ್‌ ಮೋಹಕ್ಕೆ ಒಗ್ಗಿ ಹೋಗಿದ್ದಾರೆ. ಸಿನಿಮಾ ನಾಯಕಿಯಾಗೋವರೆಗೂ ಪೋಸ್ಟರ್‌ಗಳನ್ನು ಕೊಂಡುತಂದು ಅಂಟಿಸುವ ಹವ್ಯಾಸವನ್ನು ರಕ್ಷಿತಾ ಬಿಡಲಿಲ್ಲ. ಈಗಲೂ ಬಿಡುವು ಸಿಕ್ಕರೆ ಇನ್ನಷ್ಟು 'ರ್ಯಾಂಬೋ"ಗಳು ವಾರ್ಡ್‌ರೋಬನ್ನು ಅಲಂಕರಿಸಿಯಾರು.

ಅಂದಹಾಗೆ, ರಕ್ಷಿತಾ ಪೋಸ್ಟರ್‌ಗಳ ಸಾಲಿನಲ್ಲಿರುವ ಕನ್ನಡದ ಏಕೈಕ ನಾಯಕ ಸುದೀಪ್‌. ಈತನ 'ಹುಚ್ಚ" ಚಿತ್ರ ನೋಡಿದ ನಂತರ ರಕ್ಷಿತಾ ಹುಚ್ಚಿಯಾಗಿದ್ದೇ ಈ ಪೋಸ್ಟರು ಹಚ್ಚಲು ಕಾರಣವಂತೆ.

English summary
Rakshithas room is full of well built actors photos
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada