»   » ಖ್ಯಾತಿ-ಕುಖ್ಯಾತಿಗಳ ನಟ ಸಲ್ಮಾನ್‌ಖಾನ್‌ಗೀಗ 41 ವರ್ಷ!

ಖ್ಯಾತಿ-ಕುಖ್ಯಾತಿಗಳ ನಟ ಸಲ್ಮಾನ್‌ಖಾನ್‌ಗೀಗ 41 ವರ್ಷ!

Subscribe to Filmibeat Kannada
  • ಪುಷ್ಪ ಪಾದ
ಖ್ಯಾತಿ ಮತ್ತು ಕುಖ್ಯಾತಿಗಳ ವಿವಾದಗಳ ಮಧ್ಯೆಯೇ ಬೆಳೆದ ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್‌ ಖಾನ್‌ಗೀಗ 41ರ ಸಂಭ್ರಮ. ಬುಧವಾರ ಅವರು ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಸಿನಿಮಾಗಳ ಜೊತೆಗೆ ಸಲ್ಮಾನ್‌, ವಿವಾದಗಳಿಗೆ ಗುರಿಯಾಗುತ್ತಲೇ ಬಂದಿದ್ದಾರೆ. ಮೇ.2001ರಲ್ಲಿ ಭೂಗತ ಜಗತ್ತಿನ ನಂಟು ಅವರ ಜೊತೆ ತಳುಕು ಹಾಕಿಕೊಂಡಿತ್ತು. 2002ರಲ್ಲಿ ಸಲ್ಮಾನ್‌ ಕುಡಿದು ಕಾರು ಓಡಿಸಿ, ಒಬ್ಬನ ಸಾವಿಗೆ ಕಾರಣರಾಗಿದ್ದರು. 2003ರಲ್ಲಿ ವಿವೇಕ್‌ ಒಬೆರಾಯ್‌ ಜೊತೆ ಗಲಾಟೆ, ಬೆದರಿಕೆಯ ಪ್ರಹಸನಗಳು ನಡೆದಿದ್ದವು.

ಕೃಷ್ಣ ಮೃಗ ಬೇಟೆಗೆ ಸಂಬಂಧಿಸಿದಂತೆ 2006ರಲ್ಲಿ ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಿದ್ದು ಇನ್ನೊಂದು ಮಜಲು. ಆದರೆ ಇಷ್ಟೆಲ್ಲ ವಿವಾದಗಳ ಮಧ್ಯೆಯೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಮತ್ತೊಂದು ಕಡೆ, ಬಾಲಿವುಡ್‌ನ ಈ ಅವಿವಾಹಿತ ನಟನ ಹೆಸರು, ಸಂಗೀತಾ ಬಿಜಲಾನಿ, ಐಶ್ವರ್ಯ ರೈ ಸೇರಿದಂತೆ ವಿವಿಧ ನಟಿಯರ ಜೊತೆ ಕೇಳಿಬಂದಿತ್ತು.

ಏನೋ ಇನ್ನಾದರೂ ಸಲ್ಮಾನ್‌, ವಿವಾದಗಳಿಂದ ಹೊರಬರಲಿ... ಅವರಿಗೆ ಜನ್ಮದಿನ ಶುಭಾಶಯ... ಮುಂಚಿತವಾಗಿ ಹೊಸವರ್ಷದ ಶುಭಾಶಯ...

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada