»   » ಫೆಬ್ರವರಿಯಲ್ಲಿ ಸೆಟ್ಟೇರಲಿರುವ ವಿಷ್ಣುವರ್ಧನ್‌ ಹೊಸಚಿತ್ರ

ಫೆಬ್ರವರಿಯಲ್ಲಿ ಸೆಟ್ಟೇರಲಿರುವ ವಿಷ್ಣುವರ್ಧನ್‌ ಹೊಸಚಿತ್ರ

Posted By: Super
Subscribe to Filmibeat Kannada

ಮುತ್ಯಾಲ ಸುಬ್ಬಯ್ಯ ನಿರ್ದೇಶನದ 'ರಾಜ ನರಸಿಂಹ" ಚಿತ್ರ ಪೈಪ್‌ಲೈನ್‌ನಲ್ಲಿರುವಾಗಲೇ ಮೀಸೆವೀರ ವಿಷ್ಣುವರ್ಧನ್‌ ಅವರ ಹೊಸ ಚಿತ್ರದ ಸುದ್ದಿ ಗಾಂಧಿನಗರದಿಂದ ಹೊರಬಿದ್ದಿದೆ.

'ಹೃದಯವಂತ" ವಿಷ್ಣು ಅಭಿನಯಿಸಲಿರುವ ಹೊಸ ಚಿತ್ರದ ಹೆಸರು. ಹೊಸ ವರ್ಷ, 2003 ನೇ ಇಸವಿಯ ಫೆಬ್ರವರಿಯಲ್ಲಿ 'ಹೃದಯವಂತ" ಚಿತ್ರ ಸೆಟ್ಟೇರಲಿದೆಯಂತೆ.

ಹೃದಯವಂತ ಚಿತ್ರದ ಕುರಿತು ಹೊರಬಿದ್ದಿರುವ ಸುದ್ದಿಯ ಸಾರಾಂಶ ಇಷ್ಟು -

  • ವಿಷ್ಣುಪ್ರಿಯ ನಿರ್ಮಾಪಕ ಹಾಗೂ ಜಮೀನ್ದಾರ್ರು ನಿರ್ಮಾಪಕ ಕೆ.ಮಂಜು ಈ ಚಿತ್ರವನ್ನು ನಿರ್ಮಿಸಲಿದ್ದಾರೆ.
  • ನಾಯಕಿ ಇನ್ನೂ ಸಿಕ್ಕಿಲ್ಲ . ಹುಡುಕಾಟ ಚಾಲ್ತಿಯಲ್ಲಿದೆ.
  • ಡಿ.ವಾಸು 'ಹೃದಯವಂತ" ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಕಥೆ ಹಾಗೂ ಚಿತ್ರಕಥೆ ಅವರದೇ. ಈ ಮುನ್ನ ವಿಷ್ಣು ಅಭಿನಯದ ಕಥಾನಾಯಕ ಹಾಗೂ ದಾದಾ ಎನ್ನುವ ಚಿತ್ರಗಳನ್ನು ನಿರ್ಮಿಸಿದ ದಾಖಲೆ ವಾಸು ಹೆಸರಲ್ಲಿದೆ.
  • 'ಹೃದಯವಂತ"ನ ತಂಗಿಯಾಗಿ ಛಾಯಾಸಿಂಗ್‌ ಅಭಿನಯಿಸಲಿದ್ದಾರೆ. ಅಂದಹಾಗೆ, ವಿಷ್ಣು ಛಾಯಾಸಿಂಗ್‌ ಅಭಿಮಾನಿ. ಚಿಟ್ಟೆ ಚಿತ್ರದಲ್ಲಿ ಛಾಯಾ ಅಭಿನಯ ಸಾಹಸಸಿಂಹನಿಗೆ ಇಷ್ಟವಾಗಿದೆ.
  • ದೇವರಾಜ್‌ ಹಾಗೂ ರಂಗಾಯಣ ರಘು ತಾರಾಗಣದಲ್ಲಿದ್ದಾರೆ.
  • ಸಂಭಾಷಣೆ- ಬಿ.ಎ.ಮಧು, ಸಂಗೀತ ಮತ್ತು ಸಾಹಿತ್ಯ- ಹಂಸಲೇಖ, ಛಾಯಾಗ್ರಹಣ- ರಮೇಶ್‌ಬಾಬು.

2003 ನೇ ಇಸವಿಯಲ್ಲೇ ಈ ಚಿತ್ರ ತೆರೆ ಕಾಣಲಿದೆ. ಹೃದಯವಂತರೆಲ್ಲಾ ತಪ್ಪದೆ ಚಿತ್ರವನ್ನು ನೋಡುವ ಮೂಲಕ ಹೃದಯವಂತನನ್ನು ಹರಸಬೇಕು!

English summary
Vishnu signs another movie : Hrudayavantha

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada