ಆರೋಪಗಳೆಲ್ಲಾ ಶುದ್ಧ ಸುಳ್ಳು: ಚೇತನ್ ತಿರುಗೇಟು

<ul id="pagination-digg"><li class="previous"><a href="/news/28-actor-chetan-kumar-aa-dinagalu-fame-aid0172.html">« Previous</a>

Chetan
ಇದಕ್ಕೆ ಗಂಧರ್ವ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಕಿಂಗ್ ರವಿ ಕುಮಾರ್ ಪ್ರತಿಕ್ರಿಯೆ ಹೀಗಿದೆ... "ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ನಂತರ ಬರಬರುತ್ತಾ ಚೇತನ್ ಬದಲಾಗತೊಡಗಿದರು. ಚೇತನ್ ಸಂಭಾವನೆ ಹೆಚ್ಚುತ್ತಾ ಹೋಯ್ತು. ಇದರಿಂದ ಬೇಸತ್ತ ನಾವು ಈ ಚಿತ್ರವನ್ನು ಕೈಗೆತ್ತಿಕೊಳ್ಳದೇ ಇರಲು ನಿರ್ಧರಿಸಿದೆವು. ಇದಕ್ಕೆ ಕಾರಣ ಚೇತನ್ ಅವರ ವರ್ತನೆಯೇ ಹೊರತು ಬೇರೇನಲ್ಲ."

ಇನ್ನು 'ಮರೆಯಲಾರೆ' ಎಂಬ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಲು ಹೊರಟಿದ್ದ ಶರತ್ ಕದ್ರಿ "ಶೂಟಿಂಗ್ ಶುರುವಾದ ಮೇಲೆ ಕಿರಿಕ್ ಆರಂಭಿಸಿದ ಚೇತನ್, ನಿರ್ದೇಶನದಲ್ಲೂ ಮೂಗು ತೂರಿಸಿದರು. ಅವರಿಂದಾಗಿಯೇ ನನ್ನ ಚಿತ್ರ ನಿಂತು ಹೋಗಿದೆ. ಅದೇ ಕಹಿ ನೆನಪಿನಲ್ಲಿ ನಾನೀಗ 'ಸ್ಯಾಂಡಲ್‌ವುಡ್ ಸರಿಗಮ' ಎಂಬ ಚಿತ್ರವನ್ನು ಮಾಡುತ್ತಿದ್ದೇನೆ. ಹಲವು ಹೀರೋಗಳ ಮನೆ ಬಾಗಿಲು ತಟ್ಟಿದಾಗ ಆದ ಅನುಭವ ಮತ್ತು ಚೇತನ್‌ರನ್ನು ಹಾಕಿಕೊಂಡು ನಿರ್ದೇಶಿಸಲು ಹೋದ ಅನುಭವವನ್ನು ಈ ಚಿತ್ರದಲ್ಲಿ ಹೇಳಲಿದ್ದೇನೆ" ಎಂದಿದ್ದಾರೆ.

ಇವೆಲ್ಲಕ್ಕೂ ಚೇತನ್ "ಎಲ್ಲವೂ ಶುದ್ಧ ಸುಳ್ಳು. ನನ್ನಿಂದಾಗಿ ಯಾರಿಗೂ ತೊಂದರೆಯಾಗಿಲ್ಲ. ನಾನಂತೂ ನಿರ್ದೇಶನದಲ್ಲಿ ಮೂಗು ತೂರಿಸಲು ಹೋಗಿಲ್ಲ. ಆದರೆ ಅವರು ಶೂಟಿಂಗ್ ಅರ್ಧ ಮುಗಿದ ನಂತರ, ತಾನೇ ಸ್ವತಃ ನಟಿಸುವ ಸಲುವಾಗಿ ಪಾತ್ರ ಸೃಷ್ಟಿಗೆ ಮುಂದಾದರು. ಕಥೆಯಲ್ಲಿ ಬದಲಾವಣೆಗೆ ಯತ್ನಿಸಿದರು. ಇದನ್ನು ನಾನು ಸಹಿಸಲಿಲ್ಲ. ಅಷ್ಟಕ್ಕೇ ಅವರು ನನ್ನ ಚಿತ್ರವನ್ನು ನಿಲ್ಲಿಸಿದ್ದಾರೆ. ನನ್ನದೇ ಹೆಸರಿನಲ್ಲಿ ಚಿತ್ರವನ್ನೂ ಮಾಡುತ್ತಿದ್ದಾರೆ. ಅವರಿಗೆ ಶುಭವಾಗಲಿ" ಎಂದು ಪ್ರತ್ಯುತ್ತರ ನೀಡಿದ್ದಾರೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/28-actor-chetan-kumar-aa-dinagalu-fame-aid0172.html">« Previous</a>

More from Filmibeat

English summary
Actor Chetan Kumar, aa dinagalu fame is to act in movie nagshekar direction 'Maina'. But, all these days, chetan carrier was going on with controversy.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X