ಜೈಲಿನಲ್ಲಿ ಪೌರಾಣಿಕ ಪಾತ್ರ ಒಲ್ಲೆ ಎಂದ ದರ್ಶನ್

By Rajendra

ಇಷ್ಟುದಿನ ಬೆಳ್ಳಿಪರದೆ ಮೇಲೆ ಮಿಂಚುತ್ತಿದ್ದ ನಟ ದರ್ಶನ್‍‌ಗೆ ಮತ್ತೆ ರಂಗಭೂಮಿಯಲ್ಲಿ ಬಣ್ಣ ಹಚ್ಚುವ ಚಾನ್ಸ್ ಸಿಕ್ಕಿತ್ತು. ಆದರೆ ಈ ಅಪೂರ್ವ ಅವಕಾಶವನ್ನು ಕೈಯಾರೆ ಕಳೆದುಕೊಂಡಿದ್ದಾರೆ ದರ್ಶನ್. ಪರಪ್ಪನ ಅಗ್ರಹಾರದ ಡಿ ಬ್ಲಾಕ್‌ನಲ್ಲಿ ಮೌನ ಮುಸುಕಿದ ವಾತಾವರಣ.

ಜೈಲಿನಲ್ಲಿರುವ ಕೆಲವು ಕೈದಿಗಳು ಮಂಗಳವಾರ (ಸೆ.27)ದರ್ಶನ್‌ರನ್ನು ಭೇಟಿ ಮಾಡಿ, ಅಕ್ಟೋಬರ್‌ನಲ್ಲಿ ಪೌರಾಣಿಕ ನಾಟಕವೊಂದನ್ನು ಆಡಬೇಕೆಂದಿದ್ದೇವೆ. ಅಣ್ಣಾ ನೀವೊಂದು ಪಾರ್ಟ್ ಮಾಡಬೇಕು ಎಂದು ವಿನಂತಿಸಿಕೊಂಡಿದ್ದರು. ಇದಕ್ಕೆ ನಟ ದರ್ಶನ್ ಆಗಲ್ಲ ಎಂದು ಕೈಯಾಡಿಸಿ ಕಳಿಸಿದ್ದಾರೆ.

ಬಳಿಕ ಜೈಲು ಅಧಿಕಾರಿಗಳನ್ನು ಭೇಟಿ ಮಾಡಿದ ಕೈದಿಗಳು "ಸಾರ್ ಒಸಿ ನೀವಾದರೂ ಹೇಳಿ. ನಾಟಕದಲ್ಲಿ ಪಾರ್ಟು ಮಾಡಲು ದರ್ಶನ್‌ರನ್ನು ಒಪ್ಪಿಸಿ" ಎಂದು ವಿನಂತಿಸಿಕೊಂಡಿದ್ದಾರೆ. ನಮ್ಮದೇನು ತಕರಾರಿಲ್ಲವಯ್ಯ. ನೀವೇ ಇನ್ನೊಂದಪ ಮಾತನಾಡಿಸಿ ಒಪ್ಪಿಸಿ ಎಂದು ಕೈತೊಳೆದುಕೊಂಡಿದ್ದಾರೆ.

ಇತ್ತ ಜೂನಿಯರ್ ಕಟ್ಟಾ ಜೊತೆ ಡಿ ಬ್ಲಾಕ್ ಸೆಲ್‌ನಲ್ಲಿ ಅದ್ಯಾವುದೋ ಪುಸ್ತಕದಲ್ಲಿ ದರ್ಶನ್ ಮಗ್ನರಾಗಿದ್ದಾರೆ. ಮಹಾಲಯ ಅಮಾವಾಸ್ಯೆದಿನ (ಸೆ.27) ದರ್ಶನ್ ಊಟದ ಮೆನುವಿನಲ್ಲಿ ವಿಶೇಷವೇನು ಇರಲಿಲ್ಲ. ಬೆಳಗ್ಗೆ ಚಿತ್ರಾನ್ನ. ಮಧ್ಯಾಹ್ನ ಅನ್ನ ಸಾಂಬಾರ್ ತಿಂದು ಮಲಗಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada actor Darshan rejects mythological drama, which will offered by Parappana Agrahara jail mates on Tuesday. Darshan gets a golden opportunity after he enters into the jail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X