ಡೆಹ್ರಾಡೂನ್‌ನಲ್ಲಿ ಧ್ಯಾನ್ ಮದುವೆಗೆ ಗಟ್ಟಿಮೇಳ

By Rajendra

ಕನ್ನಡ ಚಿತ್ರರಂಗದಲ್ಲಿ 'ಜೂಟಾಟ' ಆಡಿ'ಅಮೃತಧಾರೆ' ಹರಿಸಿದ ಹುಡುಗ ಧ್ಯಾನ್ ಅಲಿಯಾಸ್ ಸಮೀರ್ ದತ್ತಾನಿ ಮದುವೆಗೆ ಮಾರ್ಚ್ 12ರಂದು ಗಟ್ಟಿಮೇಳ ಮೊಳಗಲಿದೆ. ತನ್ನ ಬಾಲ್ಯದ ಗೆಳತಿ ರಿತಿಕಾ ಜಾಲಿ ಅವರನ್ನು ಡೆಹ್ರಾಡೂನಲ್ಲಿ ಧ್ಯಾನ್ ವರಿಸಲಿದ್ದಾರೆ.

ರಿತಿಕಾ ಅವರ ಸ್ವಸ್ಥಳ ಡೆಹ್ರಾಡೂನ್‌ ಆದ ಕಾರಣ ಮದುವೆ ಅಲ್ಲಿಯೇ ಆಗಬೇಕು ಎಂದು ಆಕೆ ಪಟ್ಟು ಹಿಡಿದಿದ್ದರಂತೆ. ಇದಕ್ಕೆ ಧ್ಯಾನ್ ಕೂಡ ಮೌನ ಸಮ್ಮತಿ ನೀಡಿದ್ದಾರೆ ಎನ್ನುತ್ತವೆ ಮೂಲಗಳು. ಮದುವೆಗೆ ಅದ್ದೂರಿ ಸಿದ್ಧತೆ ನಡೆದಿದ್ದು, ಮದುಮಗ ಧ್ಯಾನ್ ಈಗ ಹೊಸ ಉತ್ಸಾಹದಲ್ಲಿದ್ದಾರೆ.

ಈ ಹಿಂದೆ ಡೆಹ್ರಾಡೂನ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ಧೋನಿ ಹಾಗೂ ಸಾಕ್ಷಿ ಮದುವೆ ದಿಢೀರ್ ಅಂತ ನಡೆದಿತ್ತು. ಈಗ ಧ್ಯಾನ್ ಮತ್ತು ರಿತಿಕಾ ಮದುವೆಗೆ ಡೆಹ್ರಾಡೂನ್ ಸಾಕ್ಷಿಯಾಗಲಿದೆ. ಧೋನಿ ಮದುವೆ ಬಳಿಕ ಡೆಹ್ರಾಡೂನ್‌‍ನಲ್ಲಿ ನಡೆಯಲಿರುವ ಎರಡನೇ ಅದ್ದೂರಿ ಮದುವೆ ಇದಾಗಲಿದೆ.

ಡಿಸೆಂಬರ್ 19ರಂದು ಧ್ಯಾನ್ ಮತ್ತು ರಿತಿಕಾ ಅವರ ನಿಶ್ಚಿತಾರ್ಥ ನಡೆದಿತ್ತು. ಅಂದಹಾಗೆ ಧ್ಯಾನ್ ಅಭಿನಯದ ಸಿಹಿಮುತ್ತು, ಓ ಮನಸೇ, ಉದ್ಯಾನ್ ಎಕ್ಸ್‌ಪ್ರೆಸ್ ಹಾಗೂ ಮಥುರಾನಗರಿ ಚಿತ್ರಗಳು ಬಿಡುಗಡೆಯಾಬೇಕಿವೆ.ಹೊಸ ಬಾಳಿನ ಹೊಸಿಲಲಿ ನಿಂತಿರುವ ಧ್ಯಾನ್‌ಗೆ ಶುಭವಾಗಲಿ ಎಂದು ದಟ್ಸ್‌ಕನ್ನಡ ಹಾರೈಸುತ್ತದೆ. [ಮದುವೆ]

More from Filmibeat

English summary
Kannada film actor Dhyan A.K.A Sameer Dattani marriage to be held on March 12, 2011 in Dehradun with his childhood girl friend Ritika Jolly. The couple got engaged on December 19 and are taking their wedding vows in March. Dhyan debuts with the Kannada movie Nanna Preethiya Hudugi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X