ವಿದ್ಯಾರ್ಥಿಗಳ ಹೃದಯ ಸೂರೆಗೊಂಡ ಗಣೇಶ್
ಮೈಸೂರು ಮಹಾರಾಜ ಕಾಲೇಜಿನಲ್ಲಿ ಸಂಭ್ರಮದ ವಾತಾವರಣ. ಈ ಸಂಭ್ರಮಕ್ಕೆ ಕಾರಣರಾದವರು ಗೋಲ್ಡನ್ ಸ್ಟಾರ್ ಗಣೇಶ್. ವಿವಿಧ ಕಾಲೇಜುಗಳ 2010-11ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಗಣೇಶ್ ಶುಕ್ರವಾರ ಚಾಲನೆ ನೀಡಿದರು. ವಿದ್ಯಾರ್ಥಿಗಳ ಸಡಗರ, ಸಂಭ್ರಮ ಮುಗಿಲು ಮುಟ್ಟಿತ್ತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗಣೇಶ್, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿದರು. ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡ ಗಣೇಶ್, ತಾವು ವಿದ್ಯಾರ್ಥಿಯಾಗಿದ್ದಾಗ ಕಲಾವಿದನಾಗಬೇಕೆಂದು ಕನಸು ಕಾಣುತ್ತಿದೆ. ಓದಿನ ಜೊತೆಗೆ ನಟನೆಯ ತರಬೇತಿಯನ್ನು ಪಡೆಯುತ್ತಿದ್ದೆ ಎಂದರು.
ಈ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳು ಭಾಗವಹಿಸಿದ್ದವು. ವಿದ್ಯಾರ್ಥಿ ಸಮೂಹ ತಮ್ಮ ನೆಚ್ಚಿನ ನಾಯಕ ಗಣೇಶನನ್ನು ಹತ್ತಿರದಿಂದ ನೋಡಿ ಸಂತಸ ಪಟ್ಟರು. ಒಂದೆರಡು ಡೈಲಾಗ್ ಹೊಡೆಯುವಂತೆ ಒತ್ತಾಯಿಸಿದರು. ಗಣೇಶ್ ಅವರನ್ನು ನಿರಾಸೆಗೊಳಿಸಲಿಲ್ಲ.
ಗೋಲ್ಡನ್ ಸ್ಟಾರ್ ಗಣೇಶ್ ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿ ಕೂಲ್ ganesh golden star kool mysore maharajas college students


Click it and Unblock the Notifications