ಪುನೀತ್ ರಾಜ್ ಕುಮಾರ್ ಸಂಭಾವನೆ ರು.3.50 ಕೋಟಿ
ಯೋಗರಾಜ್ ಭಟ್ಟರ ಮಹತ್ವಾಕಾಂಕ್ಷಿ ಚಿತ್ರ ಪರಮಾತ್ಮ. ಈ ಚಿತ್ರಕ್ಕಾಗಿ ಪುನೀತ್‌ಗೆ ಭಟ್ಟರು ಭಾರಿ ಸಂಭಾವನೆಯನ್ನೇ ನೀಡಿದ್ದಾರೆ. ಮೂಲಗಳ ಪ್ರಕಾರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಂಭಾವನೆ ರು.3.50 ಕೋಟಿ ಎನ್ನಲಾಗಿದೆ. ಪುನೀತ್‌ಗೆ ಸರಿದೂಗುವ ಕನ್ನಡದ ನಟ ಸದ್ಯಕ್ಕೆ ಇನ್ನೂ ಉದಯಿಸಿಲ್ಲ. ಅತ್ಯಧಿಕ ಸಂಭಾವನೆ ಪಡೆಯುವ ಮುಂದಿನ ತಾರೆಗಳ ಪಟ್ಟಿ ಹೀಗಿದೆ.
ಇಲಿಯಾನಾ ಸಂಭಾವನೆ: ದಕ್ಷಿಣ ಭಾರತದಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಇಲಿಯಾನಾ ಡಿ'ಕ್ರೂಜ್. ಈಕೆ ಅಭಿನಯಿಸಿದ್ದು ಬೆರಳೆಣಿಕೆ ಚಿತ್ರಗಳಾದರೂ ಎಲ್ಲವೂ ಬಾಕ್ಸಾಫೀಸ್ ಉಡ್ಡೀಸ್ ಮಾಡಿದವೆ. ಈಕೆಯ ಸಂಭಾವನೆ ರು.1.25 ಕೋಟಿಯಷ್ಟಿದ್ದು, ಈಕೆಯ ಹೆಚ್ಚುವರಿ ಖರ್ಚು ವೆಚ್ಚಗಳೇ ರು.25ರಿಂದ ರು.45 ಲಕ್ಷದ ತನಕ ಇರುತ್ತವೆ.
ತ್ರಿಷಾ ಕೃಷ್ಣನ್ ಸಂಭಾವನೆ: ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಸಖತ್ ಬ್ಯುಸಿಯಾಗಿರುವ ದಕ್ಷಿಣದ ತಾರೆ ತ್ರಿಷಾ ಕೃಷ್ಣನ್. ನೆರೆಮನೆ ಹುಡುಗಿಯಂತೆ ಕಾಣುವ ಈ ಕೃಷ್ಣ ಸುಂದರಿ ಹಿಂದಿಯಲ್ಲೂ ಅದೃಷ್ಟ ಪರೀಕ್ಷೆಗೆ ಕೈಹಾಕಿ ಮುಗ್ಗರಿಸಿ ಬಿದ್ದರು. ಆದರೆ ದಕ್ಷಿಣದಲ್ಲಿ ಮಾತ್ರ ತ್ರಿಷಾ ಮ್ಯಾಜಿಕ್ ನಡೆಯುತ್ತಿದೆ. ಸಿನಿಮಾ ಒಂದಕ್ಕೆ ರು.1 ಕೋಟಿ ಚಾರ್ಚ್ ಮಾಡುತ್ತಾರೆ ತ್ರಿಷಾ. ಈಕೆಯಷ್ಟೇ ಸಂಭಾವನೆ ಪಡೆಯುವ ಬೆಂಗಳೂರು ಬ್ಯೂಟಿ ಯಾರು ಗೊತ್ತಾ?
ಅನುಷ್ಕಾ ಶೆಟ್ಟಿ ಸಂಭಾವನೆ: ತ್ರಿಷಾ ಕೃಷ್ಣನ್ ಎಣಿಸುವಷ್ಟೇ ಸಂಭಾವನೆಯನ್ನು ಬೆಂಗಳೂರು ಬ್ಯೂಟಿ ಅನುಷ್ಕಾ ಶೆಟ್ಟಿ ಪಡೆಯುತ್ತಾರೆ. ಇತ್ತೀಚೆಗೆ ಈಕೆ ಗುಟ್ಟಾಗಿ ತೆಲುಗು ನಟ ನಾಗಾರ್ಜುನ ಮಗ ನಾಗಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಸುದ್ದಿ ಹಬ್ಬಿತ್ತು. ತೆಲುಗಿನ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆ ಅನುಷ್ಕಾ ಅಭಿನಯಿಸಿದ್ದಾರೆ. ರು. 1 ಕೋಟಿ ಸಂಭಾವನೆ ಪಡೆಯುವ ಕರ್ನಾಟಕ ಮೂಲದ ನಟಿ ಈಕೆ.
ಕಾಜಲ್ ಅಗರವಾಲ್ ಸಂಭಾವನೆ: ತೆಲುಗಿನ ಭಾರಿ ಬಜೆಟ್ ಚಿತ್ರ 'ಮಗಧೀರ' ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಕಾಜಲ್ ಅಗರವಾಲ್ ಬಳಿಕ ಬಂದ ಚಿತ್ರಗಳಲ್ಲೂ ಸೈ ಅನಿಸಿಕೊಂಡರು. ಇತ್ತೀಚೆಗೆ ಈಕೆ ಅಜಯ್ ದೇವಗನ್ ಜೊತೆ ಅಭಿನಯದ ಹಿಂದಿ ಚಿತ್ರ 'ಸಿಂಗಂ' ಬಾಕ್ಸಾಫೀಸಲ್ಲಿ ಭರ್ಜರಿ ಬೆಳೆ ತೆಗೆದಿದೆ. ಆದರೆ ಈ ಚಿತ್ರಕ್ಕೆ ಮಾತ್ರ ಕನ್ನಡಿಗರು ಸರಿಯಾಗಿ ಮಂಗಳಾರತಿ ಮಾಡಿದರು. ಕಾಜಲ್ ಅಗರವಾಲ್ ಸಂಭಾವನೆ ರು.70ರಿಂದ ರು.80 ಲಕ್ಷ.
ತಮನ್ನಾ ಭಾಟಿಯಾ ಸಂಭಾವನೆ: ತಮನ್ನಾ ಭಾಟಿಯಾ ಸ್ಟೇಜ್ ಶೋಗಳಿಂದಲೇ ತಮ್ಮ ಬ್ಯಾಂಕ್ ಖಾತೆಗಳನ್ನು ತುಂಬಿಸಿಕೊಂಡ ನಟಿ. ಈಕೆ ಅಭಿನಯಿಸುವ ಚಿತ್ರಗಳಿಗಿಂತ ಸ್ಟೇಜ್ ಶೋಗಳಿಂದಲೇ ಹೆಚ್ಚಾಗಿ ಬಾಚಿಕೊಂಡಿದ್ದಾರೆ. ಈ ಹಿಂದೆ ತಮನ್ನಾ ಮೂರು ನಿಮಿಷಕ್ಕೆ ಮೂರು ಲಕ್ಷ ಎಣಿಸಿದ್ದರು. ಈಗ ಚಿತ್ರವೊಂದಕ್ಕೆ ಈಕೆಯ ಸಂಭಾವನೆ ರು.75ರಿಂದ ರು.80 ಲಕ್ಷ ಪಡೆಯುತ್ತಾರೆ. ಹಂಸಿಕಾ ಮೋಟ್ವಾನಿ ಹಾಗೂ ತಾಪಸಿಯರ ಸಂಭಾವನೆ ರು.40 ಲಕ್ಷದಷ್ಟಿದೆ. (ಏಜೆನ್ಸೀಸ್)


Click it and Unblock the Notifications











