ಸಿನಿಮಾಗಳಿಲ್ಲದೆ ಸೈಡ್ ಬಿಜಿನೆಸ್‌ಗೆ ಇಳಿದ ನಮಿತಾ

By Rajendra

ಹಾಟ್ ಬೆಡಗಿ ನಮಿತಾಗೆ ಸಿನಿಮಾದಲ್ಲಿ ಅವಕಾಶಗಳು ಕ್ರಮೇಣ ಇಳಿಮುಖವಾಗುತ್ತಿವೆ. ಇದನ್ನು ಥಟ್ಟನೆ ಗ್ರಹಿಸಿ ಜಾಗೃತವಾಗಿರುವ ನಮಿತಾ ಸೈಡ್ ಬಿಜಿನೆಸ್‌ಗೆ ಇಳಿದಿದ್ದಾರೆ! ಇಷ್ಟಕ್ಕೂ ಆಕೆಯ ಸೈಡ್ ಬ್ಯುಸಿನೆಸ್ ಏನೆಂದರೆ...ಕನ್‌ಸ್ಟ್ರಕ್ಷನ್ ಕಂಪನಿ.

ಇತ್ತೀಚೆಗೆ ಆಕೆ ಮುಂಬೈನಲ್ಲಿ ಕನ್‌ಸ್ಟ್ರಕ್ಷನ್ ಕಂಪನಿಯೊಂದನ್ನು ಆರಂಭಿಸಿದ್ದಾರೆ. ಅದರ ಬಗ್ಗೆ ಆಕೆ ಮಾತನಾಡುತ್ತಾ, ನಿರ್ಮಾಣ ಕ್ಷೇತ್ರಕ್ಕೆ ಅಡಿಯಿಟ್ಟಿರುವುದಕ್ಕೆ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಸಿನಿಮಾ ಮತ್ತೊಂದು ಕಡೆ ಬಿಜಿನೆಸ್. ಇವರಡನ್ನೂ ನಿಭಾಯಿಸಿಕೊಂಡು ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಹಾಗೆಯೇ ಮತ್ತೊಂದು ಭೀಷ್ಮ ಶಪಥವನ್ನೂ ನಮಿತಾ ಮಾಡಿದ್ದಾರೆ. ಇನ್ನು ಮುಂದೆ ಗ್ಲಾಮರ್ ಪಾತ್ರಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳುತ್ತಾರಂತೆ.

ತಮ್ಮ ಈ ನಿರ್ಣಯದಿಂದ ಅಭಿಮಾನಿಗಳು ಕಂಗಾಲಾಗಬೇಕಿಲ್ಲ. ಗ್ಲಾಮರ್ ಪಾತ್ರಗಳಿಲ್ಲದಿದ್ದರೇನಂತೆ, ಆಕ್ಷನ್, ಅಡ್ವಂಚರಸ್ ಪಾತ್ರಗಳಲ್ಲಿ ಮಿಂಚುತ್ತೇನೆ ಎಂದಿದ್ದಾರೆ. ತಮಗೆ ಅವಕಾಶಗಳು ಚೆನ್ನಾಗಿಯೇ ಬರುತ್ತಿವೆ. ಇನ್ನೂ ಮುಂದೆಯೂ ಚಿತ್ರಗಳಲ್ಲಿ ಅಭಿನಯಿಸುತ್ತೇನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Namitha is taking up a new project for income. But it is far away from film industry! She is starting a construction business.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X