ಮನೆಯಲ್ಲಿ ಒಬ್ಬಳೇ ಕೂತು ಕಣ್ಣೀರಿಟ್ಟರಂತೆ ನಿಖಿತಾ

ನನ್ನನ್ನು ಬ್ಯಾನ್ ಮಾಡಿದ ವಿಷಯ ಕೇಳಿದ ಕೂಡಲೇ ತೆಲುಗು ಮತ್ತು ತಮಿಳು ಚಿತ್ರರಂಗದ ನಟ, ನಟಿಯರು ನನ್ನ ಪರವಾಗಿ ಮಾತನಾಡಿದರು. ಚಿತ್ರಗಳಲ್ಲಿ ಅಭಿನಯಿಸಲು ನಾವು ಅವಕಾಶ ಕೊಡುತ್ತೇವೆ ಎಂದರು. ಅವರ ಸಹಕಾರ ಮನೋಭಾವವನ್ನು ನಾನೆಂದಿಗೂ ಮರೆಯಲಾರೆ. ಆದರೂ ಈಗಲೂ ನನಗೆ ಕನ್ನಡ ಚಿತ್ರರಂಗದ ಮೇಲೆ ಪ್ರೀತಿ, ವಿಶ್ವಾಸ, ಅಭಿಮಾನ ಇದೆ.
ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಚಿತ್ರದ ಕೆಲ ದೃಶ್ಯಗಳು ಬಾಕಿ ಇದ್ದವು. ಇತ್ತೀಚಿಗಷ್ಟೇ ಇದನ್ನು ಮುಗಿಸಿದ್ದೇವೆ. ಈಗ ಕನ್ನಡದ 'ಗೌರಿಪುತ್ರ' ಚಿತ್ರದ ಚಿತ್ರೀಕರಣದಲ್ಲಿದ್ದೇನೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಅವಕಾಶಗಳು ಬರುತ್ತಿವೆ. ಯಾವ ತೊಂದರೆಯೂ ಇಲ್ಲ. ಆ ವಿವಾದದಿಂದ ನೋವಾಗಿದ್ದು ನಿಜ. ಈಗ ಅದನ್ನು ಮರೆತಿದ್ದೇನೆ. ಜೀವನದಲ್ಲಿ ಇಂತಹ ಕಹಿ ಘಟನೆಗಳು ಬಂದುಹೋಗುತ್ತಿರುತ್ತವೆ" ಎಂದಿದ್ದಾರೆ ನಿಖಿತಾ.
ಕಳೆದ ವರ್ಷ ದೊಡ್ಡ ಸುದ್ದಿಯಾದ ನಟ ದರ್ಶನ್ ಹಾಗೂ ತಮ್ಮ ನಡುವಿನ ವಿವಾದಕ್ಕೆ ಪ್ರತಿಕ್ರಿಯೆಯಾಗಿ ನಟಿ ನಿಖಿತಾ ತುಕ್ರಲ್ ಹೇಳಿದ ಮಾತುಗಳಿವು. ಮಂಜು ಮಸ್ಕಲ್ ಮಟ್ಟಿ ನಿರ್ದೇಶನದ 'ಗೌರಿಪುತ್ರ' ಚಿತ್ರದ ಚಿತ್ರೀಕರಣಕ್ಕಾಗಿ ಸೋಮವಾರ ಮಂಚಿನಬೆಲೆ ಜಲಾಶಯಕ್ಕೆ ಬಂದಿದ್ದ ನಟಿ ನಿಖಿತಾ, ಮೊದಲಬಾರಿಗೆ ವಿವಾದದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











