ಲಾಬಿ ಮಾಡಿದವರಿಗೇ ರಾಜ್ಯಪ್ರಶಸ್ತಿ ಎಂದ ರಮ್ಯಾ

ಈ ವಿಷಯವಾಗಿಯೂ ರಮ್ಯಾ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. "ಇಲ್ಲಿ ಲಾಭಿ ಮಾಡಿದವರಿಗೆ ಮಾತ್ರ ಅವಾರ್ಡ್ ಸಿಗೋದು" ಎಂದು ಹೇಳಿದ್ದಾರೆ. 'ತನನಂ ತನನಂ' ಚಿತ್ರಕ್ಕಾಗಿ ಫಿಲಂಪೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ ರಮ್ಯಾ. 'ಮುಸ್ಸಂಜೆ ಮಾತು' ಮತ್ತು 'ಜಸ್ಟ್ ಮಾತ್ ಮಾತಲ್ಲಿ' ಚಿತ್ರಗಳು ಫಿಲಂಫೇರ್ ಗೆ ನಾಮನಿರ್ದೇಶನ ಆಗಿದ್ದವು.
ಪುನೀತ್ ಮೊದಲ ಚಿತ್ರ 'ಅಪ್ಪು' ವಿನ ಅವಕಾಶ ರಕ್ಷಿತಾ ಪಾಲಾದಾಗ ಜಿದ್ದಿಗಾಗಿಯೇ 'ಅವರದೇ ಮುಂದಿನ ಚಿತ್ರ 'ಅಭಿ' ಮೂಲಕ ಕನ್ನಡ ಚಿತ್ರದಲ್ಲಿ ಎಂಟ್ರಿ ಪಡೆದ ರಮ್ಯಾಗೆ, ಶಾಶ್ವತವಾಗಿ ನೆಲೆನಿಲ್ಲವ ವಿಚಾರವೇನೂ ಇರಲಿಲ್ಲ. ಆದರೆ ಅವರ ಸ್ವಭಾವ ಹಾಗೂ ಶ್ರದ್ಧೆ ಈ ಎತ್ತರಕ್ಕೆ ತಂದು ಮುಟ್ಟಿಸಿದೆ. ರಮ್ಯಾರ ಯಶಸ್ಸು ಹೀಗೆಯೇ ಮುಂದುವರಿಯಲಿ. ಜೊತೆಗೆ ರಮ್ಯಾರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು... (ಒನ್ ಇಂಡಿಯಾ ಕನ್ನಡ)
More from Filmibeat
English summary
Sandalwood most famous actress Ramya Celebrates her birthday on November 29. Happy Birthday to Ramya


Click it and Unblock the Notifications











