For Quick Alerts
  ALLOW NOTIFICATIONS  
  For Daily Alerts

  ರವಿಚಂದ್ರನ್ ದಶಮುಖದಲ್ಲಿ ಸರಿತಾ ಪುನರಾಗಮನ

  |

  ಹಿರಿಯ ನಟಿ ಸರಿತಾ ಮತ್ತೆ ಕನ್ನಡ ಚಿತ್ರದಲ್ಲಿ ಬಣ್ಣಹಚ್ಚುತ್ತಿರುವ ಸುದ್ದಿಯನ್ನು ಈಗಾಗಲೇ ತಿಳಿದಿದ್ದೀರಿ. ಆದರೆ ಯಾವ ಚಿತ್ರ ಎಂಬುದನ್ನು ಆಗ ಸರಿತಾ ಗೌಪ್ಯವಾಗಿ ಇಟ್ಟಿದ್ದರು. ಈಗ ಬಾಯ್ಬಿಟ್ಟಿರುವ ಸರಿತಾ ಆ ಚಿತ್ರ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ದಶಮುಖ' ಎಂದಿದ್ದಾರೆ. ಸರಿತಾರನ್ನು ಮತ್ತೆ ನೋಡಲು ಕನ್ನಡದ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.

  80 ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗದ್ದ ಸರಿತಾ, ಕನ್ನಡದಲ್ಲೂ ಮನೆಮಾತಾಗಿದ್ದರು. ಡಾ. ರಾಜ್ ರೊಂದಿಗೆ ಕಾಮನ ಬಿಲ್ಲು, ಭಕ್ತ ಪ್ರಹ್ಲಾದ, ಹೊಸ ಬೆಳಕು ಹಾಗೂ ಡಾ. ವಿಷ್ಣು ರೊಂದಿಗೆ ಮಲಯ ಮಾರುತ, ಶ್ರೀನಾಥ್ ಜೊತೆ ಎರಡು ರೇಖೆಗಳು ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರು.

  ಆಮೇಲೆ ಮದುವೆ, ಮಕ್ಕಳು ಎಂದು ಕುಟುಂಬದ ಜೊತೆ ವಿದೇಶದಲ್ಲಿ ನೆಲೆಸಿದ್ದ ಸರಿತಾ, ಈಗ ಮಕ್ಕಳು ದೊಡ್ಡವರಾಗಿ ಸೆಟ್ಲ್ ಆಗಿರುವುದರಿಂದ ಮತ್ತೆ ಬಣ್ಣಹಚ್ಚುವ ಮನಸ್ಸು ಮಾಡಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕನ್ನಡಕ್ಕೆ ಬಂದಿರುವ ಸರಿತಾರನ್ನು ಜನ ಖಂಡಿತಾ ಸ್ವಾಗತಿಸುತ್ತಾರೆ. ಅವರನ್ನು ಯಾರೂ ಮರೆತಿಲ್ಲ ಎಂಬುದು ಆಶ್ಚರ್ಯವಾದರೂ ಸತ್ಯ. (ಒನ್ ಇಂಡಿಯಾ ಕನ್ನಡ)

  English summary
  Actress Saritha returning to Sandalwood again with long term gap. She acts in Crazy star Ravichandran movie 'Dashamukha'. Nanjundegowda is producing this movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X