ಅಗ್ನಿ ಎದೆಗಾರಿಕೆಯಲ್ಲಿ ಸಾವು ಪ್ರೀತಿಯ ಮುಖಾಮುಖಿ

<ul id="pagination-digg"><li class="next"><a href="/news/28-movie-edegarike-agni-sridhar-story-aid0172.html">Next »</a></li></ul>

Bhavana
ಅಗ್ನಿ ಶ್ರೀಧರ್ ಎದೆಗೂಡಿನಿಂದ ಎದ್ದುಬಂದ ಕಾದಂಬರಿ ಈ 'ಎದೆಗಾರಿಕೆ' ಈಗ ಸಿನಿಮಾ ಆಗುತ್ತಿದೆ. ಸಾವನ್ನು ಎದುರಿಸುವ ಹಂತಕನ ಎದೆಗಾರಿಕೆ ಇದು ಎಂಬ ಕಥೆಯ ಎಳೆಯನ್ನು ಬಿಚ್ಚಿಟ್ಟಿದ್ದಾರೆ ಅಗ್ನಿ ಶ್ರೀಧರ್. ಸುಮನಾ ಕಿತ್ತೂರ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರದ ಕಥೆ ಹಾಗೂ ಸಂಭಾಷಣೆ ಅಗ್ನಿ ಶ್ರೀಧರ್ ಅವರದೇ. ಚಿತ್ರಕಥೆಗೆ ಸುಮನಾ ಕಿತ್ತೂರ್ ಕೂಡ ಜೊತೆಯಾಗಿದ್ದಾರೆ.

"ಭೂಗತಲೋಕದಲ್ಲಿ ಪ್ರತಿ ಹಂತಕನಿಗೂ ಇನ್ನೊಬ್ಬ ಹಂತಕ ಇರುತ್ತಾನೆ ಎಂಬುದು ಅಲಿಖಿತ ನಿಯಮ. ಈ ಚಿತ್ರದಲ್ಲಿ ಕೊಲೆಗಾರನೊಬ್ಬನಿಗೆ ಕೊಲೆಯಾಗುವ ಸಂದರ್ಭ ಬಂದಾಗ ಕೊಲೆಯಾಗುವ ವ್ಯಕ್ತಿಯ ಮನಸ್ಸಿನ ಭಾವನೆ, ಸಂಕಟ ತಳಮಳಗಳು ಹೇಗೆ ಅರ್ಥವಾಗುತ್ತವೆ. ಅದು ಅವನಿಗೆ ಹೇಗೆ ಬದುಕಿನ ದರ್ಶನವನ್ನು ಮಾಡಿಸುತ್ತದೆ ಎಂಬ ಸೂಕ್ಷ್ಮ ಸಂವೇದನೆ ಈ ಚಿತ್ರದ ತಿರುಳು.

ಇಲ್ಲಿ ಕೊಲೆ ಮಾಡುವ ಹಾಗೂ ಕೊಲೆ ಆಗಲಿರುವ ವ್ಯಕ್ತಿ ಪರಸ್ಪರ ಎದುರಾಗುತ್ತಾರೆ, ಮಾತನಾಡುತ್ತಾರೆ. ಅನೇಕ ವಿಷಯಗಳನ್ನು ಚರ್ಚಿಸುತ್ತಾರೆ. ಆದರೆ ತನ್ನಿಂದ ಕೊಲೆ ಆಗಲಿರುವ ವ್ಯಕ್ತಿ ಎದುರು ಕುಳಿತಿರುವವನೇ ಎಂಬುದು ಕೊಲೆಗಾರನಿಗೆ ಗೊತ್ತಿರುವುದಿಲ್ಲ. ಹಾಗೇ ತನ್ನ ಎದುರು ಕುಳಿತಿರುವ ವ್ಯಕ್ತಿಯೇ ತನ್ನನ್ನು ಕೊಲೆ ಮಾಡಲು ಬಂದಿರುವುದು ಎಂಬ ಸತ್ಯ ಕೊಲೆಯಾಗುವ ವ್ಯಕ್ತಿಗೂ ಗೊತ್ತಿರುವುದಿಲ್ಲ.

ಆದರೆ ನಿಜಾಂಶ ಗೊತ್ತಾದಾಗ ಇವರಿಬ್ಬರ ನಡುವೆ ಮೂಡುವ ಭಾವನೆಗಳ ತಾಕಲಾಟ ಇದೆಯಲ್ಲ, ಅದನ್ನೇ ಚಿತ್ರಕಥೆಯಲ್ಲಿ ರೋಚಕವಾಗಿ ವಿವರಿಸಲಾಗಿದೆ. ಜೀವನವಿಡೀ ಕೊಲೆಯನ್ನೇ ಕಸುಬನ್ನಾಗಿ ಮಾಡಿಕೊಂಡವನಿಗೆ ಸಾವಿನ ದರ್ಶನ ಕೊಡುವ ಪಾಠ ಇಲ್ಲಿದೆ. ಅದನ್ನು ಸಿನಿಮಾ ಎಂಬ ದೃಶ್ಯಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ತೋರಿಸಲಾಗುವುದು" ಎಂಬ ಅಗ್ನಿ ಶ್ರೀಧರ್ ಅವರ ಮಾತು ಎಲ್ಲರ ಕುತೂಹಲಕ್ಕೆ ಕಾರಣವಾಗಿರುವುದು ಸುಳ್ಳಲ್ಲ. ಮುಂದಿನ ಪುಟದಲ್ಲಿ ಮುಂದುವರಿದಿದೆ...

<ul id="pagination-digg"><li class="next"><a href="/news/28-movie-edegarike-agni-sridhar-story-aid0172.html">Next »</a></li></ul>

More from Filmibeat

English summary
Agni sridhar Story "Edegarike" is launching as movie in same title. Sumana kittur Directs this. Dedly Fame Aditya and Bhavana in a lead role. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X