For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್‌ಗೆ ಐಶ್ವರ್ಯ ರೈ ಟ್ರಿಣ್ ಟ್ರಿಣ್ ಟ್ರಿಣ್

  By Rajendra
  |

  ಈಗಷ್ಟೆ ಚೇತರಿಸಿಕೊಂಡು ಸಿಂಗಪುರದಲ್ಲಿ ತಾಚಿಕೊಂಡಿರುವ ರಜನಿಕಾಂತ್‌ಗೆ ಟ್ರಿಣ್ ಟ್ರಿಣ್ ಟ್ರಿನ್ ಫೋನ್. ಹಲೋ ಎನ್ನುತ್ತಿದ್ದಂತೆ ಅತ್ತಿಂದ ಕುಶಲವೆ ಕ್ಷೇಮವೆ ಸೌಖ್ಯವೆ ಎಂಬ ಧ್ವನಿ. ರಜನಿಕಾಂತ್ ಕಂಗಾಲಾಗಿ ಯಾರೇ ನೀನು ಚೆಲುವೆ ಎನ್ನಲು ಅದು ಜೋ ಜೋ ಲಾಲಿ ಗುಂಗಿನಲ್ಲಿರುವ ಗರ್ಭಿಣಿ ಐಶ್ವರ್ಯ ರೈ ನಾನು ಎಂದಿದ್ದಾರೆ.

  ಐಶ್ವರ್ಯ ರೈ ಗರ್ಭಿಣಿ ಎಂಬ ವಿಚಾರ ರಜನಿ ಕಿವಿಗೂ ಬಿದ್ದಿದ್ದು ಮುಂಬೈನಿಂದ ಫೋನ್ ಬಂದ ಕೂಡಲೆ ಆಕೆಯನ್ನು ಅಭಿನಂದಿಸಿದರಂತೆ. ಐಶು ಕೂಡ ರಜನಿ ಆರೋಗ್ಯದ ಬಗ್ಗೆ ವಿಚಾರಿಸಿ ಆದಷ್ಟು ಬೇಗ ಸ್ವದೇಶಕ್ಕೆ ಮರಳಿ ಎಂದು ಹಾರೈಸಿದರಂತೆ.

  ಇವರಿಬ್ಬರೂ ಎಂಧಿರನ್ ಎಂಬ ಭಾರಿ ಬಜೆಟ್ ಚಿತ್ರದಲ್ಲಿ ಅಭಿನಯಿಸಿದ್ದರು. ವಿಶೇಷ ಅಂದರೆ ಇಂಟರ್‌ನೆಟ್‌ನಲ್ಲಿ ಐಶ್ವರ್ಯ ರೈಗಿಂತಲೂ ರಜನಿ ಆರೋಗ್ಯ ಕುರಿತು ಅತಿಹೆಚ್ಚು ಸರ್ಚ್ ಮಾಡಲಾಗಿದೆ. ಐಶು ಗರ್ಭಿಣಿ ಎಂಬುದಕ್ಕಿಂತ ರಜನಿ ಆರೋಗ್ಯವೇ ಅಭಿಮಾನಿಗಳಿಗೆ ಮುಖ್ಯವಾಗಿದೆ ಎಂಬುದು ಗಮನಾರ್ಹ ಸಂಗತಿ. (ಏಜೆನ್ಸೀಸ್)

  English summary
  The hot news Aishwaraya Rai called Superstar Rajinikanth and got his blessings for her pregnancy and asked about his health and asked him to come back soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X