»   » ದ್ವಿತೀಯ ಪಿಯುಸಿಗೆ ಅಮೂಲ್ಯ ಸಲಹೆಗಳು

ದ್ವಿತೀಯ ಪಿಯುಸಿಗೆ ಅಮೂಲ್ಯ ಸಲಹೆಗಳು

Posted By:
Subscribe to Filmibeat Kannada

ಕನಸು ಕಂಗಳ ಹುಡುಗಿ ಅಮೂಲ್ಯ ಬಿಡುವಿಲ್ಲದ ಚಿತ್ರಗಳ ನಡುವೆ ಕಾಲೇಜಿಗೆ ತಪ್ಪ್ಪದೆ ಹಾಜರಾಗುತ್ತಿದ್ದಾರಂತೆ. ಈ ವರ್ಷ ಅವರು ಒಂದೇ ಒಂದು ತರಗತಿಯನ್ನು ಮಿಸ್ ಮಾಡಿಕೊಂಡಿಲ್ಲ ಎಂದು ಕಾಲೇಜಿನ ಅಧಿಕಾರಿಗಳು ತಿಳಿಸಿದ್ದಾರೆ. ಅಂದಹಾಗೆ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ (ವಾಣಿಜ್ಯ)ಓದುತ್ತಿದ್ದಾರೆ ಅಮೂಲ್ಯ

ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯ ತಿರುವು ದ್ವಿತೀಯ ಪಿಯುಸಿ. ಇದೇ ವರ್ಷ ಅಮೂಲ್ಯ ದ್ವಿತೀಯ ಪಿಯುಸಿಗೆ ಅಡಿಯಿಡುತ್ತಿದ್ದು ಹಾಜರಾತಿ ಪ್ರಮಾಣ ಕಡಿಮೆಯಾದರೆ ಹಾಲ್ ಟಿಕೆಟ್ ಕೊಡುವುದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರು ಎಚ್ಚರಿಸಿದ್ದಾರೆ. ಹಾಗಾಗಿ ಅಮೂಲ್ಯ ಈ ವರ್ಷ ಒಂದೇ ಒಂದು ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಅದೂ ತಮ್ಮ ಸ್ವಂತ ನಿರ್ಮಾಣದ ಚಿತ್ರದ ಎಂಬುದು ವಿಶೇಷ.

ಈ ಚಿತ್ರವನ್ನು ಅಮೂಲ್ಯ ಅವರ ಅಣ್ಣ ದೀಪಕ್ ನಿರ್ಮಿಸಲಿದ್ದು ಜೂನ್ ತಿಂಗಳಲ್ಲಿ ಆರಂಭವಾಗಲಿದೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ದೀಪಕ್ ಅವರೆ ಚಿತ್ರಕತೆ ರಚಿಸಿದ್ದಾರೆ. 'ಲವ್ ಗುರು' ಚಿತ್ರದ ಚಿತ್ರಕತೆಗಾಗಿ ಅದರ ನಿರ್ದೇಶಕ ಪ್ರಶಾಂತ್ ಜೊತೆ ದೀಪಕ್ ಸಹ ಕೈಜೋಡಿಸಿದ್ದರು. ಹಾಗಾಗಿ ಚಿತ್ರಕತೆ ರಚನೆಯಲ್ಲಿ ದೀಪಕ್ ಗೆ ಒಂಚೂರು ಅನುಭವವೂ ಇದೆ.

ಏತನ್ಮಧ್ಯೆ ಅಮೂಲ್ಯ ಅಭಿನಯದ 'ಪ್ರೇಮಿಸಂ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಖುಷಿಯಾಗಿದ್ದಾರೆ. ಪ್ರಕಾಶ್ ರೈ ಇದೇ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳುತ್ತಿರುವ ಚಿತ್ರ 'ನಾನು ನನ್ನ ಕನಸು' ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಮುಖ ಆಕರ್ಷಣೆ ಅಮೂಲ್ಯ.ಚಿತ್ರದಲ್ಲಿ ಅವರ ಪಾತ್ರ ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಬಿ ಸುರೇಶ್.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada