ಬೆಳ್ಳಿಪರದೆಗೆ ಅಣ್ಣಾ ಕುಮಾರಣ್ಣ ಕನ್ನಡ ಕಲರ್ ಸ್ಕೋಪ್!

By Rajendra

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೀವನಚರಿತ್ರೆ ಆಧಾರಿತ ಚಿತ್ರ ಮಾಡುವುದಾಗಿ ಅಬಕಾರಿ ಸಚಿವ ರೇಣುಕಾಚಾರ್ಯ ಅದ್ಯಾವುದೋ 'ಗ್ಯಾನ'ದಲ್ಲಿ ಹೇಳಿದ್ದರು. ಈಗ ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯ ಜೀವನ, ಸಾಧನೆಗಳ ಚಿತ್ರ ಕನ್ನಡ ಕಲರ್ ಸ್ಕೋಪ್‌ನಲ್ಲಿ ಮೂಡಿಬರಲಿದೆ!

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಬಾಳು, ಬದುಕು ಆಧರಿಸಿದ ಈ ಚಿತ್ರದ ಹೆಸರು 'ಅಣ್ಣಾ ಕುಮಾರಣ್ಣ'. ಈ ಮಹತ್ವಾಕಾಂಕ್ಷಿ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ನಿರ್ಮಾಪಕ ಕೃಷ್ಣಂರಾಜು. ಇವರು ಈ ಹಿಂದೆ ಸಾಂಗ್ಲಿಯಾನ, ಸಂಘರ್ಷ, ಅಧಿಪತಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. 'ಅಣ್ಣಾ ಕುಮಾರಣ್ಣ' ಶೀರ್ಷಿಕೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಲಾಗಿದೆ.

ಮತ್ತೊಂದು ವಿಶೇಷ ಸಂಗತಿ ಎಂದರೆ ಚಿತ್ರದ ನಾಯಕ ನಟನ ಸ್ಥಾನಕ್ಕೆ ಸ್ವತಃ ಕುಮಾರಣ್ಣನ್ನು ಸಂಪರ್ಕಿಸಿದ್ದಾರೆ ಕೃಷ್ಣಂರಾಜು. ಆದರೆ ಎಚ್ಡಿಕೆ ನಸು ನಕ್ಕು ಆಯ್ತು ನೋಡೋಣ ಎಂದಿದ್ದಾರೆ. ಚಿತ್ರದ ನಾಯಕಿಯ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada film producer Krishnam Raju to made a film on the life and times of former Chief Minister H D Kumaraswamy. The title of the movie is Anna Kumaranna, same should registered in Karnataka Film Chamber of Commerce. The heroine of the film is yet to be finalized.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X