ಎ ಆರ್ ರೆಹಮಾನ್ ಲೈವ್ ಶೋಗೆ ಅರ್ಧದಲ್ಲೆ ಬ್ರೇಕ್

By Rajendra

AR Rahman
ಜನಪ್ರಿಯ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರ ಶೋಗೆ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ತಡೆಯೊಡ್ಡಿದ ಕಾರಣ ನಾಗಪುರದಲ್ಲಿ ಶೋವನ್ನು ಅರ್ಧದಲ್ಲೆ ನಿಲ್ಲಿಸಬೇಕಾಯಿತು. ಇದರಿಂದ ಸಾವಿರಾರು ಸಂಖ್ಯ್ಯೆಯ ಅವರ ಅಭಿಮಾನಿಗಳಿಗೆ ರಸಭಂಗವಾಯಿತು.

ರೆಹಮಾನ್ ಸಂಗೀತ ಕಚೇರಿಯನ್ನು ಒನ್ಸ್ ಮೋರ್ ಒನ್ಸ್ ಮೋರ್ ಎಂದು ಕೇಳುತ್ತಾ ಕೇಳುತ್ತಾ ಸಮಯ ರಾತ್ರಿ 10 ಗಂಟೆ ಮೀರಿತ್ತು. ಕಾನೂನಿನ ಪ್ರಕಾರ ಸಮಯ ಮೀರಿದ್ದ ಕಾರಣ ಮಧ್ಯಪ್ರವೇಶಿಸಿದ ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಶೋ ಅರ್ಧದಲ್ಲೇ ನಿಲ್ಲಿಸಿದರು.

ತೀವ್ರ ನಿರಾಶರಾದ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ರೆಹಮಾನ್, ಏನೂ ಬೇಸರಪಟ್ಟುಕೊಳ್ಳಬೇಡಿ. ನನ್ನ ಮುಂದಿನ ಸಂಗೀತ ಕಚೇರಿ ಬೆಂಗಳೂರಿನಲ್ಲಿದೆ. ಸಾಧ್ಯವಾದರೆ ಅಲ್ಲಿಗೂ ಬಂದು ಹಾಡು ಕೇಳಿ ಆನಂದಿಸಿ ಎಂದು ವಿನಂತಿಸಿಕೊಂಡಿದ್ದಾರೆ.

ಭಾರತದಲ್ಲಿ ರೆಹಮಾನ್ ನಡೆಸಿದ ಮೊಟ್ಟ ಮೊದಲ ಸಂಗೀತ ಕಚೇರಿ ಇದಾಗಿತ್ತು. ದೇಶದಲ್ಲಿನ ತನ್ನ ಅಪಾರ ಅಭಿಮಾನಿ ಬಳಗಕ್ಕೆ ನಾಗಪುರ ಅನುಕೂಲವಾಗುತ್ತದೆ ಎಂಬ ಉದ್ದೇಶಕ್ಕೆ ರೆಹಮಾನ್ ಈ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
A.R. Rahman's special live-in concert in Nagpur was stopped midway by the police and civic authorities recently. Reason? It was already 10 p.m. and according to the law, the show could not continue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X