»   » ಸುಧಾಮೂರ್ತಿ ಅವರಿಂದ ಬಾಲಗಣೇಶ್ ವಿಸಿಡಿ ಬಿಡುಗಡೆ

ಸುಧಾಮೂರ್ತಿ ಅವರಿಂದ ಬಾಲಗಣೇಶ್ ವಿಸಿಡಿ ಬಿಡುಗಡೆ

Posted By:
Subscribe to Filmibeat Kannada

ಬೆಂಗಳೂರು: ಮೊತ್ತ ಮೊದಲ ಕನ್ನಡ ಅನಿಮೇಶನ್ ವಿಸಿಡಿ' ಬಾಲ ಗಣೇಶ್', ನಗರದಲ್ಲಿ ಈ ಶುಕ್ರವಾರ ಬಿಡುಗಡೆಯಾಗಲಿದೆ. ಫೌಂಟೇಶನ್ ಮ್ಯೂಸಿಕ್ ಕಂಪೆನಿ ಹೊರತಂದಿರುವ ಈ ವಿಸಿಡಿಯನ್ನು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಲೋಕಾರ್ಪಣೆ ಮಾಡಲಿದ್ದಾರೆ.

ಇಂದಿರಾನಗರದ ಸ್ವಪ್ನ ಬುಕ್ ಹೌಸ್ ನಲ್ಲಿ ಮೇ. 30 ಸಂಜೆ 5:30ಕ್ಕೆ ನಡೆಯಲಿರುವ ಸರಳ ಸಮಾರಂಭದಲ್ಲಿ ಬಾಲ ಗಣೇಶ್ ವಿಸಿಡಿಯ ಜತೆಗೆ 'ಗಲಿವರ್ ಮತ್ತು ಲಿಲ್ಲಿಪುಟ್ಸ್ ವಿಸಿಡಿಯೂ ಬಿಡುಗಡೆಯಾಗಲಿದೆ ಎಂದು ಸ್ವಪ್ನ ಬುಕ್ ಹೌಸ್ ನಮಾಲೀಕರಾದ ನಿತಿನ್ ಶಾ ಹೇಳಿದ್ದಾರೆ.

ಬಾಲಗಣಪ ಚಿತ್ರ : ಗಣಪನ ತುಂಟತನ ಹಾಗೂ ಪವಾಡಗಳನು ಆಧರಿಸಿ, ಚಿತ್ರ ತಯಾರಾಗಿದೆ. ಪ್ರಾಣಿ -ಪಕ್ಷಿಗಳು ಸೇರಿದಂತೆ ಪ್ರಕೃತಿಯೂ ಈ ಚಿತ್ರದಲ್ಲಿ ಪಾತ್ರವಾಗಿ ಕಾಣಿಸಿಕೊಂಡಿದೆ. ಪ್ರತಿ ದೃಶ್ಯಕ್ಕೆ ಹಿತವಾದ ಹಿನ್ನೆಲೆ ಸಂಗೀತ ಮತ್ತು ಧ್ವನಿಯನ್ನು ನೀಡಲಾಗಿದೆ ಎಂದು ಫೌಂಟೇನ್ ಮ್ಯೂಸಿಕ್ ಕಂಪೆನಿ ಪ್ರಕಟಣೆ ನೀಡಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 93437 11221

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada