»   » ಬಿರುಗಾಳಿಯಾದ ಆ ದಿನಗಳು ಖ್ಯಾತಿಯ ಚೇತನ್

ಬಿರುಗಾಳಿಯಾದ ಆ ದಿನಗಳು ಖ್ಯಾತಿಯ ಚೇತನ್

Subscribe to Filmibeat Kannada

ಬಿಸಿಲಿನ ಬೇಗೆಗೆ ತತ್ತರಿಸಿರುವ ಜನತೆಗೆ ಬಿರುಗಾಳಿ ಬೀಸಿದರೆ ಗತಿ ಏನು? ಇದು ಹಾನಿಕಾರಕ ಬಿರುಗಾಳಿ ಅಲ್ಲ. ನೃತ್ಯ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಗೆಳೆಯ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರ ಸ್ಥಾನಕ್ಕೆ ಬಡ್ತಿ ಪದೆದ ಹರ್ಷ ಬೀಸುತ್ತಿರುವ ಬಿರುಗಾಳಿ. ಇದು ಅವರ ದ್ವಿತೀಯ ನಿರ್ದೇಶನದ ಚಿತ್ರದ ಶೀರ್ಷಿಕೆ.

ಬಿರುಗಾಳಿಯಲ್ಲಿ ಅಷ್ಟೇ ವೇಗದ ಹೊಡೆದಾಟ. ನಾಯಕ ಚೇತನ್(ಆ ದಿನಗಳು ಖ್ಯಾತಿ) ಎಲೆಕ್ಟ್ರಾನಿಕ್ ಉಪಕರಣಗಳನ್ನು ಸರಬರಾಜು ಮಾಡುವಾತ. ಎದುರಾಳಿ ಪರಮೇಶಿ(ಸುಳ್ಳೇ ಸುಳ್ಳು ಹಾಡಿನ ಖ್ಯಾತಿ) ಸರಬರಾಜು ಮಾಡಬೇಡ ನಿಲ್ಲಿಸು ಎನ್ನುವಾತ. ಅವರ ಮಾತು ಕೇಳದ ನಾಯಕ ತನ್ನ ವೃತ್ತಿಯನ್ನು ಮುಂದುವರೆಸಿದಾಗ ನಡೆಯುತ್ತದೆ ಈ ಭಯಂಕರ ಮಾರಾಮಾರಿ. ಡಿಫ಼ರೆಂಟ್ ಡ್ಯಾನಿ ಅವರ ಸಾಹಸ ಸಂಯೋಜನೆಯಲ್ಲಿ ಕಂಠೀರವ ಸ್ಟೂಡಿಯೋದಲ್ಲಿ ನಿರ್ಮಿಸಲಾದ ಅದ್ದೂರಿ ಸೆಟ್‌ನಲ್ಲಿ ಈ ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು.

ಆದರ್ಶ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಿರುಗಾಳಿಯನ್ನು ಹರ್ಷ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಹರ್ಷ ನೃತ್ಯ ಸಂಯೋಜನೆಯಿರುವ ಈ ಚಿತ್ರಕ್ಕೆ ಅರ್ಜುನ್ ಅವರ ಸಂಗೀತವಿದೆ. ಎಚ್.ಸಿ.ವೇಣು ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಯೋಗಾನಂದ್ ಸಂಭಾಷಣೆ, ಡಿಫ಼ರೆಂಟ್ ಡ್ಯಾನಿ ಸಾಹಸ, ಇಸ್ಮಾಯಿಲ್ ಕಲಾ ನಿರ್ದೇಶನ, ಜಯಂತ ಕಾಯ್ಕಿಣಿ, ಕವಿರಾಜ್, ಹೃದಯಶಿವ ಗೀತರಚನೆ, ರಮೇಶ್ ನಿರ್ಮಾಣ ನಿರ್ವಹಣೆ, ಮಹೇಶ್, ಯೋಗಿ ಸಹನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಚೇತನ್, ಸಿತಾರವೈದ್ಯ, ಕಿಶೋರ್, ಮೈಕೋ ನಾಗರಾಜ್, ಪರಮೇಶ್, ಪ್ರತಾಪ್ ಮುಂತಾದವರಿದ್ದಾರೆ.


ಸಂತಸದಲ್ಲಿ ಸಂಚು
ಮಂಜುನಾಥೇಶ್ವರ ಪಿಕ್ಚರ್ಸ್ ಲಾಂಛನದಲ್ಲಿ ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಪೂರೈಸಿರುವ ಸಂಚು ಚಿತ್ರಕ್ಕೆ ರೀರೆಕಾರ್ಡಿಂಗ್ ಸಮಯದಲ್ಲಿ ಒಂದು ಸಂತಸದ ಸುದ್ದಿ ಎದುರಾಗಿದೆ. ಈ ಸಂತೋಷಕ್ಕೆ ಕಾರಣ ಆಸ್ಟ್ರಾ ನಿರ್ಮಾಣ್ ಸಂಸ್ಥೆಯ ಮಾಲೀಕ ಎಚ್.ಎಸ್.ಹಾರನ್ ಕರ್ನಾಟಕದಾದ್ಯಂತ ಚಿತ್ರದ ವಿತರಣೆ ಮಾಡಲು ಮುಂದಾಗಿದ್ದಾರೆ.
ಅನಿರೀಕ್ಷಿತ ತಿರುವುಗಳನ್ನೊಳಗೊಂಡಿರುವ ಸಂಚು ಚಿತ್ರಕ್ಕೆ ಇದೊಂದು ಅನಿರೀಕ್ಷಿತ ಸುದ್ದಿ. ಇದರಿಂದ ನಮ್ಮ ತಂಡದ ಆತ್ಮವಿಶ್ವಾಸ ಮತ್ತಷ್ಠು ಹೆಚ್ಚಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರು, ಛಾಯಾಗ್ರಾಹಕರು ಹಾಗೂ ಚಿತ್ರಕಥೆ ರಚನಕಾರರು ಆದ ಟಿ.ಜನಾರ್ಧನ್. ಎಂ.ಡಿ.ಕೌಶಿಕ್ ಈ ಚಿತ್ರದ ನಿರ್ದೇಶಕರಾದರೆ ಕೆ.ನರಸಯ್ಯ ಸಂಕಲನಕಾರರಾಗಿದ್ದಾರೆ. ಎ.ಟಿ.ರವೀಶ್ ಸಂಗೀತ ಸಂಯೋಜಿದ್ದಾರೆ. ಸ್ವಸ್ತಿಕ್ ಶಂಕರ್, ಮಹೇಶ್, ಸಂಜನಾ, ಕಂಗನಾ, ಸಾಂಬಶಿವರಾವ್ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada