ಬಳ್ಳಾರಿಯಲ್ಲಿ ಅಣ್ಣಾವ್ರು ಮತ್ತು ಸಾಹಸ ಸಿಂಹ ಪುತ್ಥಳಿ
ಬಳ್ಳಾರಿ ನಗರದ ಡಾ.ರಾಜ್ ಕುಮಾರ್ ಉದ್ಯಾನವನದಲ್ಲಿ ಅಕ್ಟೋಬರ್ 5ರ ಸಂಜೆ 5.30ಕ್ಕೆ ವರನಟ ಡಾ.ರಾಜ್ ಕುಮಾರ್ ಅವರ ಪುತ್ಥಳಿಯನ್ನು ಪಾರ್ವತಮ್ಮ ರಾಜ್ ಕುಮಾರ್ ಮತ್ತು ಅವರ ಪುತ್ರರು ಅನಾವರಣ ಮಾಡಲಿದ್ದಾರೆ. ಈ ವಿಷಯವನ್ನು ಕೆಎಂಎಫ್ ಅಧ್ಯಕ್ಷ ಶಾಸಕ ಜಿ ಸೋಮಶೇಖರ ರೆಡ್ಡಿ ತಿಳಿಸಿದರು.
ಪುತ್ಥಳಿ ಅನಾವರಣದ ದಿನ ಸಂಜೆ ಬಿಡಿಎಎ ಮೈದಾನದಲ್ಲಿ ರಾಜ್ ಕುಮಾರ್ ಕುಟುಂಬದ ಸದಸ್ಯರು ಮತು ಇತರರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಅಂದು ಪಾರ್ವತಮ್ಮ ಮತ್ತು ಕವಿ ಎಚ್ ಎಸ್ ವೆಂಕಟೇಶಮೂರ್ತಿ ಅವರಿಗೆ ಪೌರ ಸನ್ಮಾನ ನಡೆಯಲಿದೆ.
ಸಂಜೆ 6.15ರಿಂದ 2 ಗಂಟೆಗಳ ಕಾಲ ನಡೆಯುವ 'ಈ ಸಮಯ ಆನಂದಮಯ' ರಸಮಂಜರಿ ಕಾರ್ಯಕ್ರಮವನ್ನು ಪತ್ರಕರ್ತ ರವಿಬೆಳಗೆರೆ ನಿರ್ವಹಿಸಲಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ. ರಾಜ್ ಪುತ್ಥಳಿಯನ್ನು ರು.10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಇದೇ ಸಂದರ್ಭದಲ್ಲಿ ನಗರದ ನಗರೂರು ನಾರಾಯಣ ರಾವ್ ಉದ್ಯಾನದಲ್ಲಿ ಕನ್ನಡ ಭುವನೇಶ್ವರಿ, ಮಹಿಷಿ ಮತ್ತು ಶ್ರೀದುರ್ಗಾ ಮಾತಾ ಸೇರಿ ಅನೇಕ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ನವೆಂಬರ್ 5ರಂದು ಭಾರತಿ ವಿಷ್ಣುವರ್ಧನ್ ಅವರು ಡಾ.ವಿಷ್ಣುವರ್ಧನ್ ಪುತ್ಥಳಿಯನ್ನು ಅನಾವರಣ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Click it and Unblock the Notifications











