ಮೂರೇ ದಿನಗಳಲ್ಲಿ ಮೂರು ಕೋಟಿ ಬಾಚಿದ 'ಜರಾಸಂಧ'
ದುನಿಯಾ ವಿಜಯ್ ಅಭಿನಯದ ಹಾಗೂ ಶಶಾಂಕ್ ನಿರ್ದೇಶನದ 'ಜರಾಸಂಧ' ಚಿತ್ರ ಬಾಕ್ಸಾಫೀಸ್ ಚಿಂದಿ ಉಡಾಯಿಸಿದೆ. ರಾಜ್ಯದಾದ್ಯಂತ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೂರು ದಿನಗಳಲ್ಲಿ ಮೂರು ಕೋಟಿ ರೂಪಾಯಿ ಗಳಿಕೆ ಬಂದಿದೆ.
ರಾಜ್ಯದ ಗುಲ್ಬರ್ಗ, ಬೆಳಗಾವಿ, ರಾಯಚೂರು, ಬೀದರ್, ಕೋಲಾರ ಮುಂತಾದ ಕಡೆಗಳಿಂದ ದಾಖಲೆಯ ಗಳಿಕೆ ಬಂದಿರುವುದಾಗಿ ನಿರ್ದೇಶಕ ಶಶಾಂಕ್ ತಿಳಿಸಿದ್ದಾರೆ. ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಗಳಿಕೆಯೂ ಅತ್ಯುತ್ತಮವಾಗಿರುವುದಕ್ಕೆ ನಿರ್ದೇಶಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಚಿತ್ರದ ನಾಯಕಿಯಾಗಿ ಪ್ರಣೀತಾ ಅಭಿನಯಿಸಿದ್ದಾರೆ. ದೇವರಾಜ್, ರೂಪಾದೇವಿ, ಜೆ.ಕೆ, ರಂಗಾಯಣ ರಘು, ಸ್ವಯಂವರ ಚಂದ್ರು, ಚೇತನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಶ್ರೀಮಂತ್ರಾಲಯ ಕಂಬೈನ್ಸ್ ಲಾಂಛನದಲ್ಲಿ ಬಿ.ಬಸವರಾಜ್ ಹಾಗೂ ಬಿ.ಕೆ.ಗಂಗಾಧರ್ ನಿರ್ಮಿಸಿರುವ ಚಿತ್ರ ಇದಾಗಿದೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
The Kannada film industry has very high expectations from Duniya Vijay and Pranitha lead Jarasandha at the box office. Though the film has received average reviews by critics, the response and collections have been very promising. Shashank, the director of the movie revealed that, the collections of the movie crossed Rs.3 cr in three days.
ದುನಿಯಾ ವಿಜಯ್ ಪ್ರಣೀತಾ ರಂಗಾಯಣ ರಘು ಬಾಕ್ಸಾಫೀಸ್ ಶಶಾಂಕ್ duniya vijay pranitha box office rangayana raghu shashank


Click it and Unblock the Notifications











