ಭಾರತದ ಗಡಿ ದಾಟಿದ 'ಗೋವಿಂದಾಯ ನಮಃ'
ಕೋಮಲ್ ಮುಖ್ಯಭೂಮಿಕೆಯಲ್ಲಿರುವ 'ಗೋವಿಂದಾಯ ನಮಃ' ಚಿತ್ರ ಕೇವಲ ಕರ್ನಾಟಕವಷ್ಟೇ ಅಲ್ಲ ಭಾರತದ ಗಡಿಯನ್ನೂ ದಾಟಿದೆ. "ಪ್ಯಾರ್‌ಗೆ ಆಗ್‌ಬಿಟ್ಟೈತೆ" ಎಂದು ಈಗಾಗಲೆ ಯುವ ಜನಾಂಗದಲ್ಲಿ ಹುಚ್ಚೆಬ್ಬಿಸಿರುವ ಈ ಚಿತ್ರ ಮಾರ್ಚ್ 30ರಂದು ತೆರೆಕಾಣುತ್ತಿದೆ.
ಕರ್ನಾಟಕದಲ್ಲಿ ಸುಮಾರು 70 ಚಿತ್ರಮಂದಿರಗಳಲ್ಲಿ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆಯಾಗುತ್ತಿದೆ. ಯುಎಸ್‌ಎ, ಜರ್ಮನಿ, ಆಸ್ಟ್ರೇಲಿಯಾ, ಇಂಗ್ಲೆಂಡ್, ಕೆನಡಾ, ದುಬೈ, ಸಿಂಗಪುರ ಹಾಗೂ ಮಲೇಷ್ಯಾದಲ್ಲಿ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. [ವಿಡಿಯೋ]
ವಿಶಾಲ ಕರ್ನಾಟಕದ ವಿತರಣೆ ಹಕ್ಕುಗಳು ಸುರೇಶ್ ಆರ್ಟ್ಸ್ ಹೊಂದಿದ್ದರೆ, ಶಿವಮೊಗ್ಗ ಹಾಗೂ ಹೈದರಾಬಾದ್ ಕರ್ನಾಟಕದ ವಿತರಣೆ ಹಕ್ಕುಗಳು ಸೌಂದರ್ಯ ಲಹರಿ ಪಾಲಾಗಿವೆ. ಇನ್ನು ವಿದೇಶಿ ವಿತರಣೆ ಹಕ್ಕುಗಳನ್ನು ಡ್ರೀಮ್ ಹೈ ಸ್ಟುಡಿಯೋ ಹಾಗೂ ಕಸ್ತೂರಿ ಮೀಡಿಯಾ ಹೊತ್ತಿದೆ.
ಈ ಚಿತ್ರದಲ್ಲಿ ಕೋಮಲ್ ಜೊತೆ ನಾಲ್ಕು ಮಂದಿ ನಾಯಕಿಯರು ಅಭಿನಯಿಸಿದ್ದಾರೆ. ಮುಂಬೈ ಬೆಡಗಿ ಪಾರುಲ್, ಕನ್ನಡತಿ ರೇಖಾ, ಜಾರ್ಜಿಯಾ ಸುಂದರಿ ಆನಾ ಬಾರ್ಬರಾ ಹಾಗೂ ಮಧುಲಿಕಾ ಚಿತ್ರದ ನಾಯಕಿಯರು. ಗುರುಕಿರಣ್ ಸಂಗೀತವಿರುವ ಚಿತ್ರವನ್ನು ಪವನ್ ವಡೆಯರ್ ನಿರ್ದೇಶಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











