ನ.8ರಿಂದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ

By Prasad

TS Nagabharana
ಬೆಂಗಳೂರು, ಅ. 28 : ಕರ್ನಾಟಕ ಚಲನಚಿತ್ರ ಅಕಾಡೆಮಿ ನವೆಂಬರ್ 8ರಿಂದ 14ರವರೆಗೆ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವವನ್ನು ಆಯೋಜಿಸಿದೆ ಎಂದು ಅಕಾಡಮಿಯ ಅಧ್ಯಕ್ಷ ಟಿ.ಎಸ್. ನಾಗಾಭರಣ ಅವರು ಪ್ರಕಟಿಸಿದ್ದಾರೆ.

ಆಡಂಬರವಿಲ್ಲದ ಕಡಿಮೆ ಬಜೆಟ್‌ನಲ್ಲಿ ಅತ್ಯಂತ ಸರಳವಾಗಿ ಸಂಘಟಿಸಲಾಗುತ್ತಿರುವ ಈ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ನ. 8ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆ ಎಂದು ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.

ಆಧುನಿಕ ತಂತ್ರಜ್ಞಾನ ಬಳಕೆಯಾದ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿರುವ ಚಿತ್ರೋತ್ಸವನ್ನು ಬೆಂಗಳೂರು ನಗರ ಪ್ರೇಕ್ಷಕರಿಗಷ್ಟೇ ಸೀಮಿತಗೊಳಿಸದೆ, ಶಿವಮೊಗ್ಗ, ಬೀದರ್, ಧಾರವಾಡ, ಮಂಗಳೂರು, ಬೆಳಗಾವಿ, ಬಳ್ಳಾರಿ ಹಾಗು ಮೈಸೂರು ಜಿಲ್ಲೆಯ ಗ್ರಾಮೀಣ ಭಾಗದ ಚಿತ್ರಾಸಕ್ತ ಕಲಾಭಿಮಾನಿ ಪ್ರೇಕ್ಷಕರಿಗೂ ವೀಕ್ಷಿಸುವ ಅವಕಾಶವನ್ನು ಒದಗಿಸಲಾಗುವುದು ಎಂದು ಹೇಳಿದರು.

ಸಿನಿಮಾದಲ್ಲಿ ಶಿಕ್ಷಣ, ಶಿಕ್ಷಣದಲ್ಲಿ ಸಿನಿಮಾ ಎಂಬುದು ಅಕಾಡೆಮಿಯ ಆಶಯವಾಗಿದ್ದು, ಮನರಂಜನೆಯನ್ನು ಮೀರಿ ಶೈಕ್ಷಣಿಕ ದಿಕ್ಕಿನೆಡೆಗೆ ಹೆಜ್ಜೆ ಹಾಕುತ್ತಿರುವ ಅಕಾಡೆಮಿಯ ಮೊಟ್ಟ ಮೊದಲ ಸಮಾರಂಭವಾದ ಈ ಚಿತ್ರೋತ್ಸವನ್ನು ಸಾರ್ವಜನಿಕರು ಪ್ರೋತ್ಸಾಹಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಚಲನ ಚಿತ್ರೋತ್ಸವ ನಿರ್ದೇಶಕರಾದ ಎಚ್.ಎನ್. ನರಹರಿರಾವ್ ಅವರು ಚಿತ್ರೋತ್ಸವದ ವೈವಿಧ್ಯತೆಯ ಬಗ್ಗೆ ಮಾಹಿತಿ ನೀಡಿದರು.ಬೈಸಿಕಲ್ ಥೀವ್ಸ್ ನಿಂದ ಮೊದಲಗೊಂಡು ಚಾರ್ಲಿ ಚಾಪ್ಲಿನ್‌ರ ಸಿಟಿ ಲೈಟ್ಸ್, ಸತ್ಯಜಿತ್ ರೇಅವರ ಫಥೇರ್ ಪಾಂಚಾಲಿ, ಬರ್ನಾರ್ಡೋ ಚಿತೋಲುಸಿಯರ ಲಾಸ್ಟ್ ಎಂಪೆರರ್, ಅಲೆರಾ ಕುರೋಸೋವಾದ ಥ್ರೋನ್ ಆಫ್ ಬ್ಲಡ್ ಮುಂತಾದ ಅವಿಸ್ಮರಣೀಯ, ಅಪರೂಪದ ವಿದೇಶಿ ಚಿತ್ರಗಳು ಸೇರಿದಂತೆ ಭಾರತೀಯ ಮತ್ತು ಕನ್ನಡ ಚಿತ್ರಗಳನ್ನು ಈ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುವುದು ಎಂದರು.

ಈ ಬಾರಿಯ ಚಿತ್ರೋತ್ಸವವನ್ನು ಚಿತ್ರಮಂದಿರಗಳ ಬದಲಿಗೆ ಯವನಿಕ, ಸುಚಿತ್ರ ಹಾಗೂ ಮಹಿಳಾ ಸೇವಾ ಸದನ ಸಭಾಂಗಣಗಳಲ್ಲಿ ಏರ್ಪಡಿಸಲಾಗಿದೆ. ವಾರ್ತಾ ಇಲಾಖೆಯ ನಿರ್ದೇಶಕ ಡಾ. ಮುದ್ದು ಮೋಹನ್ ಅವರು, ಉತ್ತಮ ಪ್ರೇಕ್ಷಕ ವರ್ಗವನ್ನು ಚಲನಚಿತ್ರ ಅಕಾಡೆಮಿ ನಿರ್ಮಾಣ ಮಾಡುತ್ತಿದೆ. ಜನಸಾಮಾನ್ಯರಿಗೆ ಸದಭಿರುಚಿಯ ಚಿತ್ರಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಅಕಾಡೆಮಿಗೆ ವಾರ್ತಾ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X