ಸಲ್ಮಾನ್ ಖಾನ್ ನಂತೆ ಬಾಡಿಗಾರ್ಡ್ ಆದ ಜಗ್ಗೇಶ್

By Mahesh

ಮಲೆಯಾಳಂನಲ್ಲಿ ಯಶಸ್ವಿಯಾದ ಫಾರ್ಮೂಲಾನ ತಮಿಳರು ಕದ್ದರು ಆಮೇಲೆ ಹಿಂದಿಗೂ ಹೋಗಿದೆ. ಕಾಮಿಡಿ ಹಾಗೂ ಲವ್ ಕಥೆ ಇರುವ ಬಾಡಿಗಾರ್ಡ್ ಚಿತ್ರ ಈಗ ಕನ್ನಡದಲ್ಲೂ ರಿಮೇಕ್ ಆಗುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ನಂತೆ ಕನ್ನಡದಲ್ಲಿ ಬಾಡಿಗಾರ್ಡ್ ಆಗಲು ನವರಸನಾಯಕ ಜಗ್ಗೇಶ್ ಸಜ್ಜಾಗಿದ್ದಾರೆ.

ಮೂಲ ಮಲೆಯಾಳಂನಲ್ಲಿ ದಿಲೀಪ್ ನಟಿಸಿದ್ದರು. ತಮಿಳಿನಲ್ಲಿ ವಿಜಯ್, ಹಿಂದಿಯಲ್ಲಿ ಸಲ್ಮಾನ್ ನಟಿಸಿದ್ದಾರೆ. ಕನ್ನಡದಲ್ಲಿ ಉತ್ತಮ ಚಿತ್ರಗಳನ್ನು ನೀಡಿದ ನಿರ್ದೇಶಕ ಕೆವಿ ರಾಜು ಅವರ ಶಿಷ್ಯ ಆನಂದ್ ಅವರು ಮೊದಲ ಬಾರಿಗೆ ಜಗ್ಗೇಶ್ ಅವರನ್ನು ನಿರ್ದೇಶಿಸುತ್ತಿದ್ದಾರೆ.

ಹತ್ತು ವರ್ಷಗಳ ಗ್ಯಾಪ್ ನಂತರ ಕೆವಿ ರಾಜು ಅವರು ನಿರ್ದೇಶಿಸಿರುವ ರಾಜಧಾನಿ ಸಿನಿಮಾಕ್ಕೆ ಉತ್ತಮ ವಿಮರ್ಶೆ ಸಿಕ್ಕಿದೆ. ಬೆಳ್ಳಿ ಮೋಡಗಳು, ಕದನ, ಇಂದ್ರಜೀತ್, ಯುದ್ಧಕಾಂಡ, ಹುಲಿಯಾ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ ರಾಜು ಅವರಿಂದ ಸಕಲ ವಿದ್ಯೆಗಳನ್ನು ಕಲಿತಿರುವ ಆನಂದ್ ಬಗ್ಗೆ ಜಗ್ಗೇಶ್ ಭರವಸೆ ಮಾತುಗಳನ್ನಾಡಿದ್ದಾರೆ. ಮಿನಿಮಮ್ ಗ್ಯಾರಂಟಿ ನಟ ಜಗ್ಗೇಶ್ ಅವರು ಕಾಸಿಗೆ ತಕ್ಕ ಕಜ್ಜಾಯವಂತೂ ನೀಡುತ್ತಾರೆ. ಸದ್ಯಕ್ಕೆ ಜಗ್ಗೇಶ್ ಯಾವ ನಟಿಗೆ ಬಾಡಿಗಾರ್ಡ್ ಆಗಲಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ.

More from Filmibeat

English summary
Minimum guaranty actor Jaggesh turns Bodyguard. KV Raju's assistant Anand is now directing Navarasa Nayaka Jaggesh in remake movie Bodyguard. The story which was successful in Malayalam with Dileep as lead and Vijay in Tamil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X