»   » ಮಾ.29ರಂದು ಜೀ ಕನ್ನಡದಲ್ಲಿ 'ಜೊತೆ ಜೊತೆಯಲಿ'

ಮಾ.29ರಂದು ಜೀ ಕನ್ನಡದಲ್ಲಿ 'ಜೊತೆ ಜೊತೆಯಲಿ'

Subscribe to Filmibeat Kannada

ಲವ್ಲಿ ಸ್ಟಾರ್ ಪ್ರೇಮ್ ಮತ್ತು ಲಕ್ಕಿ ಸ್ಟಾರ್ ರಮ್ಯಾ ನಟಿಸಿರುವ ಶತದಿನ ಆಚರಿಸಿದ ಹೊಚ್ಚ ಹೊಸ ಚಲನಚಿತ್ರ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಜೀ ಕನ್ನಡದಲ್ಲಿ ಮಾ.29ರಂದು ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ.

ಹರಿಕೃಷ್ಣ ಅವರು ಸಂಗೀತ ನೀಡಿರುವ ಪ್ರಪ್ರಥಮ ಚಿತ್ರ ಹಾಗೂ ದರ್ಶನ್ ಸಹೋದರ ದಿನಕರ್ ತೂಗುದೀಪ್ ನಿರ್ದೇಶನದ ಪ್ರಥಮ ಚಿತ್ರ ಇದಾಗಿದೆ. ಈ ಚಿತ್ರದ ಎಲ್ಲ ಗೀತೆಗಳೂ ಸೂಪರ್ ಹಿಟ್ ಉದಾಹರಣೆಗೆ 'ಓ ಗುಣವಂತ ನೀ ಎಂದು ನನ ಸ್ವಂತ...', 'ಸುಮ್ಮನೆ ಸುಮ್ಮನೆ ಇದ್ದರು ಸುಮ್ಮನೆ ಪ್ರಾಣ ತಿಂತಾಳೆ...', 'ಸಿಕ್ತಾರೆ ಸಿಕ್ತಾರೆ ಎಲ್ಲೆಲ್ಲೂ ಸಿಕ್ತಾರೆ ಯಾಕೆ ಯಾಕೆ...' ಮುಂತಾದ ಎಲ್ಲ ಹಾಡುಗಳು ಯುವ ಜನರ ಹೃದಯ ಗೆದ್ದ ಸುಂದರ ಗೀತೆಗಳೆ ಆಗಿವೆ. ಚಿತ್ರ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಇನ್ನೂ ಕೂಡ ಚಿತ್ರದ ಗೀತೆಗಳು ಯುವಜನರ ಮೆಚ್ಚಿನ ಗೀತೆಗಳಲ್ಲಿ ಇರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಲವ್ಲಿ ಸ್ಟಾರ್ ಪ್ರೇಮ್ ಮತ್ತು ಲಕ್ಕಿ ಸ್ಟಾರ್ ರಮ್ಯಾ ಅದ್ಭುತವಾಗಿ ನಟಿಸಿರುವ ಸಂಪೂರ್ಣ ಕೌಟುಂಬಿಕ ಚಲನಚಿತ್ರ ಇದಾಗಿದ್ದು ಕರ್ನಾಟಕದ ಮೂಲೆ ಮೂಲೆಗೆ ಚಿತ್ರವನ್ನು ತಲುಪಿಸಲು ಜೀ ಸಿದ್ಧವಾಗಿದೆ.ಈ ಹಿಂದೆ ಕನ್ನಡದ ಎವರ್ ಹಿಟ್ ಚಲನಚಿತ್ರ "ಜೋಗಿ"ಯನ್ನು ಕಿರುತೆರೆಯಲ್ಲಿ ಪ್ರದರ್ಶಿಸಿ ಭಾರೀ ಸಂಚಲವನ್ನು ಉಂಟುಮಾಡಿದ್ದ ಜೀ ಕನ್ನಡ ಈಗ "ಜೊತೆಜೊತೆಯಲಿ" ಸಿನೆಮಾ ಪ್ರದರ್ಶಿಸುತ್ತಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿಕ್ಕ ಪಾತ್ರವೊಂದರಲ್ಲಿ ನಟಿಸಿರುವ ಈ ಚಿತ್ರದ ತಾರಾಗಣದಲ್ಲಿ ಪ್ರೇಮ್, ರಮ್ಯಾ, ಶರಣ್, ತರುಣ್ ಸುಧೀರ್, ತಾರಕೇಶ್ ಪಟೇಲ್, ರವಿಶಂಕರ್, ರಮೇಶ್ ಭಟ್, ಮಾಲತಿ ಸರ್ದೇಶಪಾಂಡೆ, ದತ್ತಣ್ಣ ಮುಂತಾದವರಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada