twitter
    For Quick Alerts
    ALLOW NOTIFICATIONS  
    For Daily Alerts

    ಮಾತಿನ ಮನೆಯಲ್ಲಿ ಜಸ್ಟ್ ಮಾತ್ ಮಾತಲಿ

    |

    ಶಂಕರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಜಸ್ಟ್ ಮಾತ್ ಮಾತಲಿ' ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ನಡೆಯುತ್ತಿದೆ ಎಂದು ನಿರ್ಮಾಪಕ ಆರ್.ಶಂಕರ್ ತಿಳಿಸಿದ್ದಾರೆ.

    ಕನ್ನಡದಲ್ಲಿ ಈವರೆಗೂ ಸಾಕಷ್ಟು ಚಿತ್ರಗಳನ್ನು ನಿರ್ಮಿಸಿರುವ ಶಂಕರ್ ಅವರು ಸುದೀಪ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಹಾಗೂ ಸುದೀಪ್ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. 'ಚಿತ್ರದಲ್ಲಿ ನಿರ್ದೇಶಕನ ಜವಾಬ್ದಾರಿ ಹೆಚ್ಚಿರುತ್ತದೆ. ಅದೇ ನಿರ್ದೇಶಕ ನಾಯಕನೂ ಆದಾಗ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತದೆ. ಸುದೀಪ್ ಅವರು ಎರಡು ವಿಭಾಗಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ನಿರ್ಮಾಪಕರು ಸುದೀಪ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

    ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಶ್ರೀವೆಂಕಟ್ ಅವರ ಛಾಯಾಗ್ರಹಣವಿದೆ. ರಘುದೀಕ್ಷಿತ್ ಸಂಗೀತ, ಕೆಂಪರಾಜ್ ಸಂಕಲನ, ಕೆ.ನಂಜುಂಡ ಸಂಭಾಷಣೆ, ರವಿವರ್ಮ ಸಾಹಸ, ಮುರುಳಿ, ಅಂಜು ಮಹೇಂದ್ರ ನೃತ್ಯ, ನರಸಿಂಹ ನಿರ್ಮಾಣ ನಿರ್ವಹಣೆ ಹಾಗೂ ಅಚ್ಯುತರಾವ್ ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದ ತಾರಾಬಳಗದಲ್ಲಿ ಸುದೀಪ್, ರಮ್ಯ, ಅವಿನಾಶ್, ರಾಜೇಶ್, ಸಂಗೀತಾ, ಕೀರ್ತೀಗೌಡ, ಯತಿರಾಜ್, ಅರುಣ್‌ಸಾಗರ್, ರಘು ಮುಂತಾದವರಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Wednesday, October 28, 2009, 16:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X