»   » ಮೋಹಕ ತಾರೆ ರಮ್ಯಾ ಹುಟ್ಟುಹಬ್ಬಕ್ಕೆ ಶುಭಾಶಯ

ಮೋಹಕ ತಾರೆ ರಮ್ಯಾ ಹುಟ್ಟುಹಬ್ಬಕ್ಕೆ ಶುಭಾಶಯ

Posted By:
Subscribe to Filmibeat Kannada
<ul id="pagination-digg"><li class="next"><a href="/news/28-actress-ramya-nature-success-sandalwood-aid0172.html">Next »</a></li></ul>
Ramya
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಜನುಮದಿನ ನಾಳೆ. ಅಂದರೆ ನವೆಂಬರ್ 29 ರಮ್ಯಾ ಬರ್ತ್ ಡೇಟ್. ಕಾಕತಾಳೀಯ ಎಂಬಂತೆ ಈ ನವೆಂಬರ್ 29ಕ್ಕೆ 29 ವರ್ಷಕ್ಕೆ ಕಾಲಿಡಲಿದ್ದಾರೆ ರಮ್ಯಾ. ಕಳೆದ 6 ವರ್ಷಗಳಿಂದ ಕನ್ನಡದ ನಂಬರ್ ಒನ್ ನಟಿ ಎನಿಸಿಕೊಂಡಿರುವ ರಮ್ಯಾ ಹುಟ್ಟೂರು ಕರ್ನಾಟಕದ ಮಂಡ್ಯ ಜಿಲ್ಲೆ. ಮೂಲ ಹೆಸರು ದಿವ್ಯಸ್ಪಂದನ.

ಸದ್ಯಕ್ಕೆಸೂಪರ್ ಸ್ಟಾರ್ ಉಪೇಂದ್ರ ಜೊತೆ 'ಕಠಾರಿವೀರ ಸುರಸುಂದರಾಂಗಿ' ಚಿತ್ರದಲ್ಲಿ ನಟಿಸುತ್ತಿರುವ ರಮ್ಯಾಇದೊಂದು '3 ಡಿ' ಸಿನಿಮಾ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. "ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ" ಎಂದಿದ್ದಾರೆ ರಮ್ಯಾ. "ಮೊದಲ ಚಿತ್ರ 'ಅಭಿ' ವೇಳೆ ರಾಘವೇಂದ್ರ ರಾಜ್ ಕುಮಾರ್, "ನೀನು ಹೆಚ್ಚು ಕಾಲ ಚಿತ್ರರಂಗದಲ್ಲಿ ಇರಬೇಕಮ್ಮಾ" ಎಂದಿದ್ದರಂತೆ. (ರಮ್ಯಾ ಹುಟ್ಟುಹಬ್ಬದ ವಿಡಿಯೋ)

ರಮ್ಯಾ ಹೆಚ್ಚು ಕಾಲವಲ್ಲ, ಅತೀ ಹೆಚ್ಚು ಅನ್ನಬಹುದಾದಷ್ಟು ಕಾಲ ಕನ್ನಡದ ನಂಬರ್ ಒನ್ ನಟಿಯಾಗಿ ಮೆರೆದರು ರಮ್ಯಾ. ಮೋಹಕ ತಾರೆ, ಸ್ಯಾಂಡಲ್ ವುಡ್ ಕ್ವೀನ್ ಬಿರುದು ಹೊಂದಿರುವ ರಮ್ಯಾ ಬಣ್ಣದ ಲೋಕಕ್ಕೆ ಬಂದು ಹತ್ತು ವರ್ಷವಾಯ್ತು. ಸದ್ಯಕ್ಕಂತೂ ರಮ್ಯಾ ನಂಬರ್ ಒನ್ ನಟಿ. ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳು... ನಿಮಗೊಂದು ಸುವರ್ಣಾವಕಾಶ! ರಮ್ಯಾರಿಗೆ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ನೀವು ಈ ಮೂಲಕ ಗುಲಾಬಿ ಕಳಿಸಬಹುದು.

ರಮ್ಯಾ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ಪುಟದಲ್ಲಿ....

<ul id="pagination-digg"><li class="next"><a href="/news/28-actress-ramya-nature-success-sandalwood-aid0172.html">Next »</a></li></ul>
English summary
Sandalwood most famous actress Ramya Celebrates her birthday on November 29. Happy Birthday to Ramya.&#13; &#13;
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada