twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಸ್ಪರ್ಧಿಸಿರುವ ಚಿತ್ರಗಳು

    By Rajendra
    |

    2008-09ನೇ ಸಾಲಿನ ಚಲನಚಿತ್ರ ಪ್ರಶಸ್ತಿಗೆ 74 ಚಿತ್ರಗಳು ಸ್ಪರ್ಧಿಸಿವೆ. ಈ ಬಾರಿ ದಾಖಲೆ ಸಂಖ್ಯೆಯ ಚಿತ್ರಗಳು ಸ್ಪರ್ಧಿಸಿದ್ದು ಆಯ್ಕೆ ಸಮಿತಿಗೆ ತಲೆನೋವಾಗಿ ಪರಿಣಮಿಸಿದೆ. ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಹಿರಿಯ ಚಿತ್ರ ನಿರ್ದೇಶಕ ಎಚ್ ಆರ್ ಭಾರ್ಗವ ಅವರನ್ನು ಸರ್ಕಾರ ಆಯ್ಕೆ ಮಾಡಿದೆ.

    ಪ್ರಶಸ್ತಿಗಾಗಿ ಸ್ಪರ್ಧಿಸಿರುವ ನಟಿಯರಲ್ಲಿ ಶ್ರುತಿ (ಅಕ್ಕ ತಂಗಿ), ಸುಪ್ರೀತಾ (ಅಂಬಾರಿ), ರಮ್ಯಾ (ಮುಸ್ಸಂಜೆ ಮಾತು), ಅನಿತಾ ಭಟ್ (ಸೈಕೊ), ಐಂದ್ರಿತಾ ರೇ(ಜಂಗ್ಲಿ), ವರ್ಷಾ (ನವಗ್ರಹ), ರಾಧಿಕಾ ಪಂಡಿತ್ (ಮೊಗ್ಗಿನ ಮನಸು), ಶರ್ಮಿಳಾ ಮಾಂಡ್ರೆ (ವೆಂಕಟ ಇನ್ ಸಂಕಟ), ಅಮೂಲ್ಯ (ಚೈತ್ರದ ಚಂದ್ರಮ) ಮುಖ್ಯವಾದವರು.

    ನಟರಲ್ಲಿ ರಮೇಶ್ ಅರವಿಂದ್, ಗಣೇಶ್, ಪುನೀತ್ ರಾಜ್ ಕುಮಾರ್, ಸುದೀಪ್, ವಿಜಯ್, ದರ್ಶನ್ ಮುಂತಾದವರಿದ್ದಾರೆ. ಧಿಮಾಕು, ಕಬಡ್ಡಿ, ಮುಸ್ಸಂಜೆ ಮಾತು, ಅಂತರ್ಧಾನ, ಹಾರು ಹಕ್ಕಿಯನೇರಿ, ಚೈತ್ರದ ಚಂದ್ರಮ, ಕಲಾಕಾರ್, ಚಂದುಳ್ಳಿ ಚೆಲುವೆ, ಚೈತನ್ಯ, ಅಂಬಾರಿ, ವಂಶಿ, ಮಾಘದ ಮೋಡ, ಗಗ್ಗರ(ತುಳು), ವಾಸ್ತವ, ಅಂತರಗಂಗೆ, ನೀ ನನ್ನ ಮನಸು, ಪ್ರೀತಿಯ ತೇರು, ಕನ್ನಡದ ಕಿರಣ್ ಬೇಡಿ, ಕಾರಂತಜ್ಜನಿಗೊಂದು ಪತ್ರ, ಕೆಸರಿನ ಕಮಲ, ಚೆನ್ನ, ಮಳೆಗಾಲ, ಪ್ರಶ್ನೆ. ನವಿಲೇ ನವಿಲೇ, ವೆಂಕಟ ಇನ್ ಸಂಕಟ, ಸೈಕೋ.

    ನಂದಾದೀಪ, ನೀನೇ ನೀನೇ, ಸಂಸ್ಕಾರವಂತ, ಬಿರುಗಾಳಿ, ದರೋಡೆ, ಹಸಿರು ಉಸಿರು, ನವಗ್ರಹ, ಬೆಟ್ಟದಪುರ ದಿಟ್ಟ ಮಕ್ಕಳು, ನಿಷೇಧಾಜ್ಞೆ, ಗಣೇಶ ಮತ್ತೆ ಬಂದ, ಇಜ್ಜೋಡು, ಜಂಗ್ಲಿ, ಸ್ಲಂ ಬಾಲ, ಜೋಶ್, ಸಂಗಮ, ನೀನ್ಯಾರೆ, ಮುಖಪುಟ, ವಿಮುಕ್ತಿ, ಮೇಘ ನಂ.1, ನನ್ನುಸಿರೇ, ಅಜಂತಾ, ಚಾಣಾಕ್ಷ, ಮೇಘನಾ, ಬನ, ಕಾನನ.

    ಗಂಗಾ ಕಾವೇರಿ, ಸೋನಾ (ಲಂಬಾಣಿ), ಪಿಯುಸಿ, ಅರಮನೆ, ತಾಜ್ ಮಹಲ್, ಪಯಣ, ಐಡ್ಯಾ ಮಾಡ್ಯಾರ, ಜ್ಞಾನಜ್ಯೋತಿ ಸಿದ್ದಗಂಗಾ, ಮಂದಾಕಿನಿ, ಅಕ್ಕ ತಂಗಿ, ಬೇಲಿ ಹೊಲ, ಸರ್ಕಸ್, ಮಣ್ಣಿನ ಮಡಿಲು, ಪ್ರಚಂಡ ರಾವಣ, ಗಂಗೆ ಬಾರೆ ತುಂಗೆ ಬಾರೆ ಮತ್ತು ಈ ಸಂಭಾಷಣೆ. 2009-10ನೇ ಸಾಲಿನ ಪ್ರಶಸ್ತಿಯೂ ಬಾಕಿ ಇದೆ.

    Monday, June 28, 2010, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X