ಸಾಧು ಕೋಕಿಲ ಹಾಕಿದ್ದು 80 ಲಕ್ಷ; ಬಂದದ್ದು 2 ಕೋಟಿ

ಚಿತ್ರಕ್ಕೆ ಹೂಡಿರುವ ಬಂಡವಾಳ ಟಿವಿ ರೈಟ್ಸ್‌ನಲ್ಲೇ ಚುಕ್ತಾ ಆಗಿದೆ. ಅದರ ಮೇಲೆ ಬಂದದ್ದೆಲ್ಲಾ ಫಾಯ್ದ. ಭಾರಿ ಪ್ರಚಾರ ಪಡೆದು ತೆರೆಗೆ ಅಪ್ಪಳಿಸಿದ ಜೋಗಯ್ಯ, ಸಂಜು ವೆಡ್ಸ್ ಗೀತಾ, ಕೆಂಪೇಗೌಡ ಚಿತ್ರಗಳಿಗೂ ನೈಂಟಿ ಚಿತ್ರ ಕಿಕ್ಕು ಇಳಿಸಿದೆ. ಬಾಕ್ಸಾಫೀಸರಲ್ಲಿ ಬ್ಯಾಲೆನ್ಸ್ ತಪ್ಪಿಲ್ಲ ನೈಂಟಿ.
ಸಾಮಾನ್ಯವಾಗಿ ಆಲ್‌ರೌಂಡರ್ ಕೆಲಸ ಮಾಡುವ ಸಾಧು ಕೋಕಿಲ 'ನೈಂಟಿ' ಚಿತ್ರಕ್ಕೆ ಮಾತ್ರ ನಟನೆಯ ಜೊತೆಗೆ ನಿರ್ಮಪಕರಾಗಿಯೇ ಉಳಿದರು. ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ಲಕ್ಕಿ ಶಂಕರ್‌ಗೆ ಒಪ್ಪಿಸಿದರು. ಹೆಸರಿನ ಮಹಾತ್ಮೆಯೋ ಏನೋ ಚಿತ್ರಕ್ಕೂ ಲಕ್ಕಿ ಲಾಟರಿ ಹೊಡೆದಿದೆ.
ಕುಡುಕರ ಕಣ್ಣು ತೆರೆಸುತ್ತಿರುವ ಈ ಚಿತ್ರಕ್ಕೆ ಮಹಿಳಾ ಪ್ರೇಕ್ಷಕರಿಂದಲೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಎಂದರೆ '90' ಸೆಂಚುರಿ ಬಾರಿಸಿರುವುದು. ಚಿತ್ರ ವಿತರಕರ ಜೇಬಿಗೂ 'ನೈಂಟಿ' ಮೋಸ ಮಾಡಿಲ್ಲ. ಒಟ್ಟಿನಲ್ಲಿ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಸಾಧುಗೂ ಒಂದು ಕಾಲ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
According to trade sources, the Kannada film 90, made on a modest Rs 80 lakh, has already raked in Rs 2 crore. Sadhu Kokila produced ‘90’ is creating a record that could be tough to beat.


Click it and Unblock the Notifications











