»   » ಶ್ರಾವಣದಲ್ಲಿ ಬೆಳ್ಳಿತೆರೆಗೆ ಅಕ್ಕ- ತಂಗಿ ಜೋಡಿ

ಶ್ರಾವಣದಲ್ಲಿ ಬೆಳ್ಳಿತೆರೆಗೆ ಅಕ್ಕ- ತಂಗಿ ಜೋಡಿ

Posted By:
Subscribe to Filmibeat Kannada

'ಆಗಮಿಸುತ್ತಿದೆ ಶ್ರಾವಣ. ಕಟ್ಟೊಣ್ಣ ಮನೆಮನೆ ಬಾಗಿಲಿಗೂ ತಳಿರುತೋರಣ.' ಎಂಬ ಪದದಂತೆ ಶ್ರಾವಣ ಬಂದರೆ ಹಬ್ಬಗಳ ಸಾಲು ಆರಂಭ. ಅಣ್ಣ - ತಂಗಿಯರ ಬಾಂಧವ್ಯದ ಪ್ರತೀಕವಾಗಿರುವ ನಾಗರ ಪಂಚಮಿ ಬರುವುದು ಈ ಮಾಸದಲ್ಲೇ ಆದರೂ ರಮೇಶ್‌ಯಾದವ್ ನಿರ್ಮಾಣದ ಅಕ್ಕ ತಂಗಿ ಚಿತ್ರ ಇದೇ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ.

ಅಳುಮುಂಜಿ ಪಾತ್ರಗಳಿಗೆ ಹೆಸರುವಾಸಿಯಾದ ಶೃತಿ ಹಾಗೂ ದುನಿಯಾ ಖ್ಯಾತಿಯ ರಶ್ಮಿಯ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಸುಂದರ ಸಾಂಸಾರಿಕ ಚಿತ್ರವಾಗಲಿದೆ ಎಂ ಬುದು ನಿರ್ಮಾಪಕರ ಅನಿಸಿಕೆ. ಅಕ್ಕ ತಂಗಿಚಿತ್ರಕ್ಕೆ ಮೊದಲಪ್ರತಿ ಸಿದ್ದವಾಗಿದ್ದು ಸದ್ಯದಲ್ಲೇ ಸೆನ್ಸಾರ್ ಮುಂದೆ ಕಾಣಿಸಿಕೊಳ್ಳಲಿದೆ. ಆರ್ ಮ್ಯೂಸಿಕ್ ಸಂಸ್ಥೆ ಮೂಲಕ ನಿರ್ಮಾಪಕರೇ ಚಿತ್ರದ ಧ್ವನಿಸುರುಳಿಗಳನ್ನು ಹೊರತರಲಿದ್ದಾರೆ. ಸಹೋದರಿಯರ ಹೃದಯಂಗಮ ಸನ್ನಿವೇಶಗಳನ್ನೊಳಗೊಂಡ ಈ ಚಿತ್ರಕ್ಕೆ ಎಸ್.ಮಹೇಂದರ್ ಅವರು ಕಥೆ, ಚಿತ್ರತ್ರಕೆಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಸುರೇಶ್‌ಬಾಬು ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಪಿ.ಆರ್.ಸೌಂದರ್‌ರಾಜ್ ಸಂಕಲನ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಸತ್ಯಾನಂದ ಪತ್ರೋಟ, ಕೆ.ಕಲ್ಯಾಣ್, ಕವಿರಾಜ್, ಎಸ್.ಮಹೇಂದರ್ ಗೀತರಚನೆಯಿರುವ ಈ ಚಿತ್ರದಲ್ಲಿ ಅಕ್ಕರೆಯ ಅಕ್ಕನಾಗಿ ಶ್ರುತಿ ವಾತ್ಸಲ್ಯಮಯಿ ತಂಗಿಯಾಗಿ ದುನಿಯಾ ಖ್ಯಾತಿಯ ರಶ್ಮಿ ಅಭಿನಯಿಸಿದ್ದಾರೆ. ಶರಣ್, ಮೋಹನ್, ಕಿಶೋರ್, ಎಂ.ಎನ್.ಲಕ್ಷ್ಮೀದೇವಿ, ಕಿಶೋರಿಬಲ್ಲಾಳ್, ಶಂಕರ್‌ರಾವ್, ಬಿರಾದರ್ ಮುಂತಾದವರು ಇವರೊಂದಿಗಿದ್ದಾರೆ.


ಹೃದಯಕ್ಕೆ ರೀರೆಕಾರ್ಡಿಂಗ್
ಹೃದಯ ಪದವನ್ನೊಳಗೊಂಡ ಚಿತ್ರಗಳು ಕನ್ನಡದಲ್ಲಿ ಬಹುತೇಕ ಬಂದಿವೆ. ಈಗ ಆ ಸಾಲಿಗೆ ಸೇರುತ್ತಿರುವ ಮತ್ತೊಂದು ಚಿತ್ರ ನಿನ್ನಲ್ಲೇ ನನ್ನ ಹೃದಯ. ಹಲವು ಆಲ್ಬಂಗಳಿಗೆ ನೃತ್ಯ ನಿರ್ದೇಶನ ಮಾಡಿ ಅನುಭವವಿರುವ ಚಂದ್ರಶೇಖರ ರೆಡ್ಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ್ಫಲ್ಲಿ ಐದು ಹಾಡುಗಳಿದ್ದು ಮಡಿಕೇರಿ, ಇರುವು ಜಲಪಾತ, ಹೆಸರುಘಟ್ಟ ಹಾಗೂ ಬೆಂಗಳೂರಿನಲ್ಲಿ ಈ ಗೀತೆಗಳು ಚಿತ್ರೀಕೃತವಾಗಿದೆ. ಡಬ್ಬಿಂಗ್ ಪೂರ್ಣವಾಗಿರುವ ಚಿತ್ರಕ್ಕೆ ಅರುಣ್ ಸ್ಟೂಡಿಯೋದಲ್ಲಿ ರೀರೆಕಾರ್ಡಿಂಗ್ ಪ್ರಕ್ರಿಯೆ ಆರಂಭವಾಗಿದೆ.

ಪ್ರಕಾಶ್ ದೊಡ್ಡಕೆನ್ನಳೆ ನಿರ್ಮಿಸುತ್ತಿರುವ ಡಿ.ತಿಲಕ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ದ್ವಂದ್ವ ನಾಯಕ/ನಾಯಕಿಯರಿದ್ದು ಒಂದು ಜೋಡಿಯನ್ನು ಗೌಪ್ಯವಾಗಿಡಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ. ನಿರ್ದೇಶಕರೇ ಚಿತ್ರಕಥೆ ಬರೆದು ನೃತ್ಯ ನಿರ್ದೇಶನದ ಹೊಣೆ ಹೊತ್ತಿರುವ ಈ ಚಿತ್ರಕ್ಕೆ ಕೆ.ಸಿ.ಉಮೇಶ್ ಅವರ ಛಾಯಾಗ್ರಹಣವಿದೆ. ಎನ್.ಕುಮಾರ್, ಗೀತಪ್ರಿಯ ರಚಿಸಿರುವ ಗೀತೆಗಳಿಗೆ ಆರ್ಯಕಿರಣ್ ಅವರ ಸಂಗೀತವಿದೆ. ಜ಼್ಞಾನೇಶ್‌ಚಂದ್ರು ಸಂಕಲನ, ಪಾಪಣ್ಣ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಮನೋಜ್, ಚಿಂತನಾಕೃಷ್ಣ, ಪದ್ಮಜಾರಾವ್ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada