ವಿಮಾನ ಕಂಡು ಹಿಡಿದ ಕನ್ನಡಿಗನ ಚಲನಚಿತ್ರ

ಭಾರದ್ವಾಜ ಮುನಿಗಳು ಸಂಸ್ಕೃತದಲ್ಲಿ ರಚಿಸಿದ ವೈಮಾನಿಕ ಶಾಸ್ತ್ರ 'ಯಂತ್ರ ಸ್ವಾರಸ್ಯ'ವನ್ನು ಅರಿತ ಸುಬ್ಬರಾಯಶಾಸ್ತ್ರಿಗಳು ವಿಮಾನಯಾನಕ್ಕೆ ಹೊಸ ಭಾಷ್ಯವನ್ನು ಬರೆದವರು. 1903ರಲ್ಲಿ ಮಾರುತ್ಸಕ ಎಂಬ ವಿಮಾನವನ್ನು ಸುಬ್ಬರಾಯ ಶಾಸ್ತ್ರಿಗಳು ಮುಂಬೈನಲ್ಲಿ ಉಡಾಯಿಸಿದ್ದರೂ ಕೂಡ. ಆದರೆ, ಬ್ರಿಟಿಷ್ ಸರ್ಕಾರ ಈ ವಿಷಯವನ್ನು ಮುಚ್ಚಿಟ್ಟಿದ್ದಂತೂ ಕಠೋರ ಸತ್ಯ ಎನ್ನುತ್ತಾರೆ ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್.
ಜನ ಸಾಮಾನ್ಯರಲ್ಲಿಒಬ್ಬ ಈ ವಿಷಯದ ಬಗ್ಗೆ ಕುತೂಹಲ ಮೂಡಿ ಅನ್ವೇಷಣೆಯಲ್ಲಿ ತೊಡಗುತ್ತಾನೆ. ಆಗ ಅವನಿಗೆ ಗೋಚರಿಸುವ ಸತ್ಯವನ್ನು ಎರಡೂವರೆ ಗಂಟೆಗಳ ಕಾಲ ರಸವತ್ತಾಗಿ ತೋರಿಸಲು ಶ್ರಮ ಪಟ್ಟಿದ್ದೇನೆ. ಸದಭಿರುಚಿ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ಬೆಂಬಲಿಸುವ ವಿಶ್ವಾಸವಿದೆ. ರಾಜ್ಯದ ಎಲ್ಲೆಡೆ ಈ ಚಿತ್ರದ ಪ್ರದರ್ಶನ ನಡೆಸುವ ಉದ್ದೇಶವಿದೆ ಎಂದು ಸುಚೇಂದ್ರ ಹೇಳಿದರು>
ಆಸಕ್ತರು ಸಿನಿಮಾ ನೋಡಲು ಈ ಕುಮಾರಸ್ವಾಮಿ ಲೇಔಟ್ ಹತ್ತಿರವಿರುವ ಕೆವಿ ಸುಬ್ಬಣ್ಣ ಆಪ್ತ ರಂಗಮಂದಿರಕ್ಕೆ ಆಗಸ್ಟ್ 1ರಂದು ಸಂಜೆ 5 ಗಂಟೆಗೂ ಮುಂಚೆ ತಲುಪಬಹುದು. ನಿಮ್ಮ ಸ್ಥಳ ಕಾಯ್ದಿರಿಸಲು ಸುಚೇಂದ್ರ ಅವರ ಸಂಪರ್ಕ ಸಂಖ್ಯೆ 94480 67308 ಗೆ ಮುಂಚಿತವಾಗಿ ಕರೆ ಮಾಡುವುದನ್ನು ಮರೆಯಬೇಡಿ.


Click it and Unblock the Notifications











