twitter
    For Quick Alerts
    ALLOW NOTIFICATIONS  
    For Daily Alerts

    ವಿಮಾನ ಕಂಡು ಹಿಡಿದ ಕನ್ನಡಿಗನ ಚಲನಚಿತ್ರ

    By Mahesh
    |

    Prapatha Movie Director Suchendra Prasad
    ಇತಿಹಾಸದ ಪುಟಗಳಲ್ಲಿ ಕಾಣದಂತೆ ಮಾಯವಾದ ಸತ್ಯವನ್ನು ಸಾರ ಹೊರಟಿರುವ ಹಾಗೂ ಭಾರತೀಯರೆಲ್ಲರೂ ಹೆಮ್ಮೆಯಿಂದ ನೋಡಬೇಕಾದ ಚಿತ್ರವೊಂದು ಈ ವಾರ ನಗರದಲ್ಲಿ ವಿಶೇಷ ಪ್ರದರ್ಶನ ಕಾಣುತ್ತಿದ್ದೆ. ರೈಟ್ ಸೋದರರಿಗೂ ಮೊದಲೇ ವಿಮಾನ ಹಾರಾಟದಲ್ಲಿ ಯಶ ಕಂಡಿದ್ದ ಆನೇಕಲ್ ಸುಬ್ಬರಾಯ ಶಾಸ್ತ್ರಿಯ ಜೀವನಗಾಥೆಯನ್ನು ಪ್ರೇಕ್ಷಕರಿಗೆ ಉಣ ಬಡಿಸುವ 'ಪ್ರಪಾತ' ಸಿನಿಮಾ ಆಗಸ್ಟ್ 1 ರಂದು ವಿಶೇಷ ಪ್ರದರ್ಶನ ಕಾಣುತ್ತಿದೆ.

    ಭಾರದ್ವಾಜ ಮುನಿಗಳು ಸಂಸ್ಕೃತದಲ್ಲಿ ರಚಿಸಿದ ವೈಮಾನಿಕ ಶಾಸ್ತ್ರ 'ಯಂತ್ರ ಸ್ವಾರಸ್ಯ'ವನ್ನು ಅರಿತ ಸುಬ್ಬರಾಯಶಾಸ್ತ್ರಿಗಳು ವಿಮಾನಯಾನಕ್ಕೆ ಹೊಸ ಭಾಷ್ಯವನ್ನು ಬರೆದವರು. 1903ರಲ್ಲಿ ಮಾರುತ್ಸಕ ಎಂಬ ವಿಮಾನವನ್ನು ಸುಬ್ಬರಾಯ ಶಾಸ್ತ್ರಿಗಳು ಮುಂಬೈನಲ್ಲಿ ಉಡಾಯಿಸಿದ್ದರೂ ಕೂಡ. ಆದರೆ, ಬ್ರಿಟಿಷ್ ಸರ್ಕಾರ ಈ ವಿಷಯವನ್ನು ಮುಚ್ಚಿಟ್ಟಿದ್ದಂತೂ ಕಠೋರ ಸತ್ಯ ಎನ್ನುತ್ತಾರೆ ನಟ, ನಿರ್ದೇಶಕ ಸುಚೇಂದ್ರ ಪ್ರಸಾದ್.

    ಜನ ಸಾಮಾನ್ಯರಲ್ಲಿಒಬ್ಬ ಈ ವಿಷಯದ ಬಗ್ಗೆ ಕುತೂಹಲ ಮೂಡಿ ಅನ್ವೇಷಣೆಯಲ್ಲಿ ತೊಡಗುತ್ತಾನೆ. ಆಗ ಅವನಿಗೆ ಗೋಚರಿಸುವ ಸತ್ಯವನ್ನು ಎರಡೂವರೆ ಗಂಟೆಗಳ ಕಾಲ ರಸವತ್ತಾಗಿ ತೋರಿಸಲು ಶ್ರಮ ಪಟ್ಟಿದ್ದೇನೆ. ಸದಭಿರುಚಿ ಚಿತ್ರಗಳನ್ನು ಕನ್ನಡ ಪ್ರೇಕ್ಷಕರು ಬೆಂಬಲಿಸುವ ವಿಶ್ವಾಸವಿದೆ. ರಾಜ್ಯದ ಎಲ್ಲೆಡೆ ಈ ಚಿತ್ರದ ಪ್ರದರ್ಶನ ನಡೆಸುವ ಉದ್ದೇಶವಿದೆ ಎಂದು ಸುಚೇಂದ್ರ ಹೇಳಿದರು>

    ಆಸಕ್ತರು ಸಿನಿಮಾ ನೋಡಲು ಈ ಕುಮಾರಸ್ವಾಮಿ ಲೇಔಟ್ ಹತ್ತಿರವಿರುವ ಕೆವಿ ಸುಬ್ಬಣ್ಣ ಆಪ್ತ ರಂಗಮಂದಿರಕ್ಕೆ ಆಗಸ್ಟ್ 1ರಂದು ಸಂಜೆ 5 ಗಂಟೆಗೂ ಮುಂಚೆ ತಲುಪಬಹುದು. ನಿಮ್ಮ ಸ್ಥಳ ಕಾಯ್ದಿರಿಸಲು ಸುಚೇಂದ್ರ ಅವರ ಸಂಪರ್ಕ ಸಂಖ್ಯೆ 94480 67308 ಗೆ ಮುಂಚಿತವಾಗಿ ಕರೆ ಮಾಡುವುದನ್ನು ಮರೆಯಬೇಡಿ.

    Thursday, July 29, 2010, 11:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X