ಮದುವೆಮನೆ ಆಗಲಿದೆ ಇನ್ನೊಂದು ಮುಂಗಾರು ಮಳೆ

ಅದರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಅವರಂತೂ ಮದುವೆ ಮನೆ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದು ಅವರ ಮುಖದಲ್ಲಿ ಸ್ಷಷ್ಟವಾಗಿ ಕಾಣುತ್ತಿದ್ದರೂ ಮಾತಿನಲ್ಲಿ ಅದನ್ನು ಬಚ್ಚಿಟ್ಟುಕೊಂಡರು ಗಣೇಶ್. "ವೈಯಕ್ತಿಕವಾಗಿ ತುಂಬಾ ಖುಷಿ ಕೊಟ್ಟ ಚಿತ್ರ. ಈ ಚಿತ್ರ ಚೆನ್ನಾಗಿದೆ, ಎಲ್ಲರ ಪ್ರೋತ್ಸಾಹ ಬೇಕು" ಎಂಬ ಚುಟುಕು ನೀಡಿ ಮಾತನ್ನಾಡಲು ಉಳಿದವರಿಗೆ ಮೈಕ್ ಕೊಟ್ಟರು. ಆದರೆ ಉಳಿದವರು ತಮ್ಮ ಮಾತುಗಳಲ್ಲಿ ಗಣೇಶ್ ಅಭಿನಯದ ಮಗ್ಗೆ ಮೆಚ್ಚುಗೆಮಳೆ ಸುರಿಸಿಯೇ ಬಿಟ್ಟರು.
'ಯು' ಸರ್ಟಿಫಿಕೇಟ್ ಪಡೆದಿರುವ ಮದುವೆ ಮನೆ ಚಿತ್ರ ಸಾಕಷ್ಟು ಚೆನ್ನಾಗಿ ಮೂಡಿಬಂದಿದೆ ಎಂಬ ಚಿತ್ರ ನೋಡಿದವರ ಹೇಳಿಕೆ ಈಗ ಗುಟ್ಟಾಗಿ ಉಳಿದಿಲ್ಲ. ಗಣೇಶ್ ತಮ್ಮ ಕಳೆದುಹೋಗಿದ್ದ ಸ್ಟಾರ್ ಇಮೇಜನ್ನು ಈ ಚಿತ್ರದ ಮೂಲಕ ಮತ್ತೆ ಗಳಿಸಲಿದ್ದಾರೆ ಎಂಬುದು ಈಗ ಜಗಜ್ಜಾಹೀರು. ಗಣೇಶ್ ಪಾತ್ರ ಮತ್ತು ಅವರ ಅಭಿನಯ ಎರಡೂ ಭರ್ಜರಿಯಾಗಿದ್ದು ಇದು ಇನ್ನೊಂದು "ಮುಂಗಾರು ಮಳೆ" ಆಗುವ ಸೂಚನೆ ದಟ್ಟವಾಗಿದೆ. ಗಣೇಶ್ ಮುಖದಲ್ಲಿ ಮಿಂಚುತ್ತಿರುವ ಕಾಂತಿ, ಮೌನದಲ್ಲೇ ಎಲ್ಲವನ್ನೂ ಹೇಳುತ್ತಿದೆ.
ಚಿತ್ರತಂಡವಂತೂ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಮದುವೆ ಮನೆಯನ್ನು ಮಾಡಿರುವ ರೆಹಮಾನ್ ಹಾಗೂ ಮದುವೆ ಊಟ ಬಡಿಸಲು ಸಿದ್ಧವಾಗಿರುವ ಕೆ. ಮಂಜು ಅವರಂತೂ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ, ಮದುವೆ ಮನೆ ಮೈಲಿಗಲ್ಲು ಸ್ಥಾಪಿಸಲಿದೆ ಎಂದು. ಇನ್ನು ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ಭವಿಷ್ಯದ ನಿರ್ದೇಶಕ ಎನಿಸಿಕೊಳ್ಳಲಿದ್ದಾರಂತೆ. ಅಲ್ಲಿಗೆ ಸಿನಿಮಾಪ್ರಿಯರು ಭರ್ಜರಿ ಮದುವೆಯೂಟಕ್ಕೆ ರೆಡಿಯಾಗಬಹುದು. ಮದುವೆ ಮನೆ ಮರೆಯೊಲ್ಲ ತಾನೇ..!(ಒನ್ ಇಂಡಿಯಾ ಕನ್ನಡ)


Click it and Unblock the Notifications











