ಮಾ.30ರಿಂದ ಮಮ್ಮುಟ್ಟಿ ಶಿಕಾರಿ ಅಮೋಘ ಪ್ರಾರಂಭ
ಮಲಯಾಳಂ ಮೆಗಾ ಸ್ಟಾರ್ ಮಮ್ಮುಟ್ಟಿ ಅಭಿನಯದ ಚೊಚ್ಚಲ ಕನ್ನಡ ಚಿತ್ರ ಶಿಕಾರಿ ಮಾರ್ಚ್ 30ರಂದು ತೆರೆಕಾಣುತ್ತಿದೆ. ಈ ಚಿತ್ರ ಮಾರ್ಚ್ 30ಕ್ಕೆ ಬಿಡುಗಡೆಯಾಗುತ್ತದೋ ಇಲ್ಲವೋ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಮಾರ್ಚ್ 30ರಂದು ಚಿತ್ರ ಬಿಡುಗಡೆಯಾಗುತ್ತಿರುವುದಾಗಿ ಇಂದು ಅಧಿಕೃತ ಪ್ರಕಟಣೆ ಹೊರಬಿದ್ದಿದೆ.
ಬೆಂಗಳೂರಿನ ತ್ರಿಭುವನ್, ವೀರೇಶ್, ನವರಂಗ್, ಉಮಾ, ಸಿದ್ದೇಶ್ವರ, ಗೋವರ್ಧನ್ ಸೇರಿದಂತೆ ಪಿವಿಆರ್, ಐನಾಕ್ಸ್(ಮಂತ್ರಿ, ಸ್ವಾಗತ್, ಜೆಪಿ ನಗರ) ಮಲ್ಟಿಫೆಕ್ಸ್‌ಗಳಲ್ಲೂ ಚಿತ್ರ ತೆರೆಕಾಣುತ್ತಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಭಯ್ ಸಿಂಹ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ 'ಶಿಕಾರಿ'. ಅವರ ಚೊಚ್ಚಲ ನಿರ್ದೇಶನದ 'ಗುಬ್ಬಚ್ಚಿಗಳು' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಒಲಿದಿತ್ತು. ಶಿಕಾರಿ ಚಿತ್ರದ ನಿರ್ಮಾಪಕರು ಕೆ.ಮಂಜು.
ಚಿತ್ರದ ಪಾತ್ರವರ್ಗದಲ್ಲಿ ಆದಿತ್ಯ, ಮೋಹನ್, ನೀನಾಸಂ ಅಚ್ಯುತ್, ಶರತ್ ಲೋಹಿತಾಶ್ವ, ನೀನಾಸಂ ಅಶ್ವತ್ಥ್ ಮುಂತಾದವರಿದ್ದಾರೆ. ಚಿತ್ರದ ನಾಯಕಿ ಪೂನಂ ಬಾಜ್ವಾ. ಈಗಾಗಲೆ ಮಲಯಾಳಂನಲ್ಲಿ ಬಿಡುಗಡೆಯಾಗಿರುವ ಚಿತ್ರ ಉತ್ತಮ ವಿಮರ್ಶೆಗೆ ಪಾತ್ರವಾಗಿದೆ. ಕನ್ನಡದ ಶಿಕಾರಿ ಬಗ್ಗೆಯೂ ಸಾಕಷ್ಟು ಭರವಸೆಗಳಿವೆ. (ಒನ್‌ಇಂಡಿಯಾ ಕನ್ನಡ)


Click it and Unblock the Notifications











