ಎದೆಗಾರಿಕೆಯೊಂದಿಗೆ ಹಾಜರಾದ ಅಗ್ನಿ ಶ್ರೀಧರ್

ಇದಕ್ಕಾಗಿ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡಿರುವ ಸುಮನಾ, ಅವರು ಈ ಮೊದಲು ನಿರ್ದೆಶಿಸಿದ್ದ 'ರಾಜಕೀಯ ಕಥಾವಸ್ತು'ವನ್ನು ಒಳಗೊಂಡಿದ್ದ 'ಸ್ಲಂ ಬಾಲ' ಕ್ಕಿಂತ ಇದು ಸಾಕಷ್ಟು ವಿಭಿನ್ನ ಎಂಬ ಪ್ರಜ್ಞೆ ಹೊಂದಿದ್ದಾರಂತೆ. ಹಾಗಾಗಿ ಸೂಕ್ತವಾದ ಮಾಹಿತಿಗಳನ್ನು ಕಲೆಹಾಕಿದ್ದಲ್ಲದೇ ಚಿತ್ರಕಥೆಯಲ್ಲಿ ಗಮನವಿಟ್ಟು ತೊಡಗಿಸಿಕೊಂಡಿದ್ದನ್ನು ಹೇಳಿಕೊಂಡರು.
ತಾರಾಗಣದ ಆಯ್ಕೆಯಲ್ಲಿ ಕೂಡ ಜಾಣತನ ಕಾಣುವಂತಿದೆ. 'ಡೆಡ್ಲಿ ಸೋಮ' ನಂತಹ ನೈಜ ಪಾತ್ರಕ್ಕೆ ಸಾಕಷ್ಟು ಜೀವ ತುಂಬಿ ಪ್ರೇಕ್ಷಕರ ಮನತುಂಬಿದ್ದ ಆದಿತ್ಯ, ಈ ಎದೆಗಾರಿಕೆಯಲ್ಲಿ ಮುಖ್ಯಪಾತ್ರವನ್ನು ಪೋಷಿಸುತ್ತಿದ್ದಾರೆ. ಜೋಡಿಯಾಗಿ 'ಚಂದ್ರಮುಖಿ ಪ್ರಾಣಸಖಿ'ಯಲ್ಲಿ ರಮೇಶ್ ಗೆ ಪ್ರಾಣಸಖಿಯಾಗಿದ್ದ ಭಾವನಾ ಇದ್ದಾರೆ. ಜೊತೆಗೆ ಶಶಿಕುಮಾರ್, ಗುರುದತ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಅತುಲ್ ಕುಲಕರ್ಣಿ, ಯಮುನಾ ಮೂರ್ತಿ, ಮೇಘನಾ ಹೀಗೆ ಪ್ರತಿಭಾವಂತರ ದಂಡೇ ಇಲ್ಲಿದೆ.
ಹೀಗೆ ಸಾಕಷ್ಟು ಪೂರ್ವ ತಯಾರಿ ಹಾಗೂ ಈಗಾಗಲೇ ಸಂಚಲನ ಸೃಷ್ಟಿಸಿದ್ದ ಕಥೆ ಎದೆಗಾರಿಕೆ ಇದೀಗ ಚಿತ್ರವಾಗಿ ಮೂಡಿಬರಲಿರುವುದು ಸ್ಯಾಂಡಲ್ ವುಡ್ ನಲ್ಲಿ ಮಿಂಚಿನ ಸಂಚಾರ ಸೃಷ್ಟಿಸಿದೆ. ಅಗ್ನಿ ಕಿಡಿ, ಸುಮನಾ ಪ್ರತಿಭೆಯ ಸಂಗಮವಾಗಿ ಮೂಡಿಬರಲಿದೆ ಈ ಸಿನಿಮಾ. ಕಲಾತ್ಮಕ ಹಾಗೂ ಕಮರ್ಷಿಯಲ್ ಚಿತ್ರಗಳ ನಡುವಿನ ಸೇತುವೆಯಾಗಲಿದೆ ಎನ್ನಲಾಗಿರುವ ಈ ಚಿತ್ರ, ಈ ದಿನಗಳ ಇನ್ನೊಂದು 'ಆ ದಿನಗಳು' ಆಗುವ ನಿರೀಕ್ಷೆ ಹುಟ್ಟುಹಾಕಿದೆ.


Click it and Unblock the Notifications











