»   » ಹೊಂಗನಸು ಕಂಡ ಪ್ರೇಮ್ ಸಿಹಿಮುತ್ತಿನ ನಶೆಯಲ್ಲಿ

ಹೊಂಗನಸು ಕಂಡ ಪ್ರೇಮ್ ಸಿಹಿಮುತ್ತಿನ ನಶೆಯಲ್ಲಿ

Subscribe to Filmibeat Kannada

ನೆನಪಿರಲಿ ಪ್ರೇಮ್ ಎಂದೇ ಖ್ಯಾತರಾದ ಪ್ರೇಮ್ ಅವರ ನೆನಪಿರಲಿ ಚಿತ್ರದ ನಂತರ ಬಂದ ಚಿತ್ರಗಳು ಪ್ರೇಕ್ಷಕರ ನೆನಪಿನಲ್ಲಿ ಉಳಿಯಲೇ ಇಲ್ಲ. ಬಹು ನಿರೀಕ್ಷಿತ ಹೊಂಗನಸು ಹಾಗೂ ಗುಣವಂತ ಚಿತ್ರಗಳ ಸೋಲಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರೇಮ್. ಹೊಸ ಹೆಜ್ಜೆ ಇಟ್ಟಿದ್ದಾರೆ. ಬಹು ತಾರಾಗಣದ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಲು ಒಪ್ಪಿದ್ದಾರೆ.

ಗುರುವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಇದೇ ಮೊದಲ ಬಾರಿಗೆ ಕಾರ್ಪೊರೇಟ್ ವಲಯದ ಪರ್ಸೋನ ಪ್ರೊಡಕ್ಷನ್ ಕಂಪೆನಿ ನಿರ್ಮಿಸುತ್ತಿರುವ 'ಸಿಹಿಮುತ್ತು' ಚಿತ್ರ ಸೆಟ್ಟೇರಿತು.ಖ್ಯಾತ ಛಾಯಾಗ್ರಾಹಕ ಕಮ್ ನಿರ್ದೇಶಕ ಅಶೋಕ್ ಕಶ್ಯಪ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮ್ ಅವರ ಜತೆಗೆ ಧ್ಯಾನ್ ಹಾಗೂ ಕೋಮಲ್ ನಟಿಸಲಿದ್ದಾರೆ. ಮುಂಬಯಿ ಬೆಡಗಿ ಡಿಂಪಲ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ್, ಲೇಖಕಿ ರೇಖಾ ರಾಣಿ, ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಮ್ ,ಅಶೋಕ್ ಕಶ್ಯಪ್ ಅವರು 'ಸಿಹಿಮುತ್ತು 'ಚಿತ್ರದ ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪರ್ಸೋನಾ ಸಂಸ್ಥೆ ಪರವಾಗಿ ಸಿರೀಶ್ ಕುಮಾರ್, ನಾರಾಯಣಬಾಬು, ಪೂರ್ಣಿಮಾ ನಾರಾಯಣ್ ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದರು.

(ದಟ್ಸ್ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada