ಮಳೆ ಬರಲಿ ಮಂಜು ಇರಲಿ ಎನ್ನುತ್ತಿರುವ ಪಾರ್ವತಿ!

By Staff

ಪುನೀತ್ ರಾಜ್ ಕುಮಾರ್ ಜತೆ ಮಿಲನ ಚಿತ್ರದಲ್ಲಿ ನಟಿಸಿದ್ದ ಪಾರ್ವತಿ ಮೆನನ್ ಮತ್ತೆ ಕನ್ನಡಕ್ಕೆ ಹಿಂದಿರುಗಿದ್ದಾರೆ. ಅವರು ಅಭಿನಯಿಸುತ್ತಿರುವ ಕನ್ನಡದ ಎರಡನೇ ಚಿತ್ರ ಮಳೆ ಬರಲಿ ಮಂಜು ಇರಲಿ. ವಿಜಯ ಲಕ್ಷ್ಮಿ ಸಿಂಗ್ ನಿರ್ಮಿಸಿ ನಿರ್ದೇಶಿಸುತ್ತಿರುವ ಚಿತ್ರ. ಮಳೆ ಬರಲಿ ಮಂಜು ಇರಲಿ ಧ್ವನಿಸುರುಳಿಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಮುಖ್ಯ ಭೂಮಿಕೆಯಲ್ಲಿ ಶ್ರೀನಗರ ಕಿಟ್ಟಿ ಮತ್ತು ನಾಗಕಿರಣ್ ಇದ್ದಾರೆ.

ಮಿಲನ ನಂತರ ಪಾರ್ವತಿ ಮೆನನ್ ಎರಡು ವರ್ಷ ನಾಪತ್ತೆಯಾಗಿದ್ದರು. ಇಷ್ಟು ದಿನ ಎಲ್ಲಿದ್ದರು ಎಂದು ಕೇಳಿದರೆ, ಬಂದ ಎಲ್ಲ ಅವಕಾಶಗಳನ್ನು ಒಪ್ಪಿಕೊಳ್ಳಲು ನಾನು ಸಿದ್ಧಳಿಲ್ಲ. ನನಗೆ ಒಪ್ಪಿಗೆಯಾಗುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಹಾಗಾಗಿ ಇಷ್ಟು ದಿನ ಕಾಯಬೇಕಾಯಿತು ಎನ್ನುತ್ತಾರೆ. ನಾಯಕ ನಟ, ಬ್ಯಾನರ್ ಯಾವುದೇ ಆಗಿರಲಿ ಕತೆ ಚೆನ್ನಾಗಿರಬೇಕು ಎಂಬುದು ಪಾರ್ವತಿ ಅವರ ಅಭಿಪ್ರಾಯ.

ಪಾರ್ವತಿ ಮೆನನ್ ಬರೀ ಕನ್ನಡದಲ್ಲಷ್ಟೇ ನಟಿಸುತ್ತಿಲ್ಲ ತಮಿಳು ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ. ಮೋಸರ್ ಬೇರ್ ಕಂಪನಿ ನಿರ್ಮಿಸುತ್ತಿರುವ 'ಪೂ'ಎಂಬ ತಮಿಳು ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಶಶಿ ಎಂಬುವವರು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕ ನಟನಾಗಿ ಶ್ರೀಕಾಂತ್ ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X