ಪಿ ಎನ್ ಸತ್ಯ 'ಪಾಗಲ್' ಮ್ಯಾಜಿಕ್ ಶೀಘ್ರದಲ್ಲಿ ತೆರೆಗೆ

ಪಿ ಎನ್ ಸತ್ಯಾ ನಿರ್ದೇಶನದ ಚಿತ್ರ 'ಪಾಗಲ್' ಗೆ ನಟಿ ಪೂಜಾ ಗಾಂಧಿ ನಾಯಕಿ. ನಿರ್ದೇಶನದ ಜೊತೆ ಈ ಚಿತ್ರದಲ್ಲಿ ನಟನೆಯನ್ನೂ ಸತ್ಯ ಮಾಡುತ್ತಿರುವುದು ನಿಮ್ಮಾಣೆಗೂ ಸತ್ಯ. ಮಾಸ್ ನಿರ್ದೇಶಕ ಈ ಸತ್ಯ. ಮೆಜೆಸ್ಟಿಕ್ ಚಿತ್ರದ ಮೂಲಕ ದರ್ಶನ್ ರನ್ನು ಚಾಲೆಂಜಿಂಗ್ ಸ್ಟಾರ್ ಮಾಡಿದವರು.
ಮೆಜೆಸ್ಟಿಕ್ ನಂತರವೂ ಅಷ್ಟೇ. ಸುದೀಪ್ ಜೊತೆ ಗೂಳಿ, ದರ್ಶನ್ ಜೊತೆ ಶಾಸ್ತ್ರಿ ಹೀಗೆ ಸಾಲು ಸಾಲು ಮಾಸ್ ಚಿತ್ರಗಳ ಸರದಾರರಾಗಿ ಸ್ಯಾಂಡಲ್ ವುಡ್ ನಲ್ಲಿ 'ಮಾಸ್ ಡೈರೆಕ್ಟರ್' ಎಂಬ ಬಿರುದು ಅಂಟಿಕೊಂಡಿದ್ದು. ಈಗ 'ಪಾಗಲ್' ಮೂಲಕ ನಟನಾಗುವ ಅವರ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಪ್ರೇಕ್ಷಕರು ನಟನಾಗಿ ಒಪ್ಪಿಕೊಳ್ಳುತ್ತಾರೆಯೇ ಎಂಬ ಕುತೂಹಲಕ್ಕೆ ಉತ್ತರ ದೊರೆಯಲಿದೆ ಶೀಘ್ರದಲ್ಲಿ. (ಒನ್ ಇಂಡಿಯಾ ಕನ್ನಡ)
English summary
Director P N Satya's upcoming movie 'Pagal' is releasing very shortly. Pooja Gandhi is Pair for him.


Click it and Unblock the Notifications