For Quick Alerts
  ALLOW NOTIFICATIONS  
  For Daily Alerts

  ಭಾರತ ವಿಶ್ವಕಪ್ ಗೆದ್ದರೆ ಪೂನಂ ಪಾಂಡೆ ದಿಗಂಬರ ಅವತಾರ!

  By Rajendra
  |

  ಈ ಸಿನಿಮಾ ತಾರೆಗಳಿಗೆ ಅದೇನು ಕೇಡುಗಾಲ ಬಂದಿದೆಯೋ ಏನೋ. ಬಟ್ಟೆ ಬಿಚ್ಚಿ ತಮ್ಮ ದೇಹದ ಅಂಕುಡೊಂಕುಗಳನ್ನು ಪ್ರದರ್ಶಿಸಿ ಬಿಟ್ಟರೆ ತಾವು ಜಗತ್ಪ್ರಸಿದ್ಧರಾಗುತ್ತೇನೆ ಎಂಬ ಭ್ರಮೆ ಇಟ್ಟುಕೊಂಡಿದ್ದಾರೆ ಅನ್ನಿಸುತ್ತದೆ. ರೂಪದರ್ಶಿ ಹಾಗೂ ಇನ್ನೂ ಬೆಳ್ಳಿತೆರೆಯಲ್ಲಿ ಉದಯಿಸುತ್ತಿರುವ ಪೂನಂ ಪಾಂಡೆ ಮಾಡಹೊರಟಿರುವುದೂ ಈಗ ಅದನ್ನೆ. [ಪೂನಂ ಪಾಂಡೆ ಗ್ಯಾಲರಿ]

  ಒಂದು ವೇಳೆ ಭಾರತ ತಂಡ ವಿಶ್ವಕಪ್ ಕ್ರಿಕೆಟ್ ಗೆದ್ದರೆ ತಾನು ಸಂಪೂರ್ಣ ಬಟ್ಟೆ ಬಿಚ್ಚಿ ಕುಣಿದಾಡುವುದಾಗಿ ಪ್ರಾಮಿಸ್ ಮಾಡಿದ್ದಾರೆ. ಫೀಫಾ ವರ್ಲ್ಡ್ ಕಪ್‌ನಲ್ಲೂ ಕೆಲವು ವಿದೇಶಿ ರೂಪದರ್ಶಿಯರು ವಿವಸ್ತ್ರಳಾಗುವುದಾಗಿ ಈ ಹಿಂದೆ ಘೋಷಿಸಿದ್ದರು. ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿರುವ ಪೂನಂ ಭಾರತ ತಂಡ ಗೆದ್ದರೆ ಬೆತ್ತಲಾಗುವುದಾಗಿ ಹೇಳಿದ್ದಾರೆ.

  ಭಾರತ ತಂಡಕ್ಕೆ ಬಹಳಷ್ಟು ಬೆಂಬಲ ಬೇಕಾಗಿದೆ. ಹಾಗಾಗಿ ತಾವು ಈ ರೀತಿ ಬೆಂಬಲಿಸುತ್ತಿರುವುದಾಗಿ ಆಕೆ ಹೇಳಿಕೊಂಡಿದ್ದಾರೆ. ನೀವು ಬಟ್ಟೆ ಬಿಚ್ಚಿದರೆ ಭಾರತ ಕ್ರಿಕೆಟ್ ತಂಡಕ್ಕೆ ಹೇಗೆ ಸ್ಫೂರ್ತಿಯಾಗುತ್ತೆ? ಎಂಬ ಪ್ರಶ್ನೆಗೆ, ತಮ್ಮ ನಗ್ನ ದೇಹವನ್ನು ನೋಡಿ ಟೀಂ ಇಂಡಿಯಾದ ಹುಡುಗರಲ್ಲಿ ಮತ್ತಷ್ಟು ಹುರುಪು ಮೂಡಲಿದೆ ಎಂದಿದ್ದಾರೆ!

  ಟೀಂ ಇಂಡಿಯಾವನ್ನು ಭೇಟಿ ಮಾಡಿ ಅವರ ಡ್ರೆಸ್ಸಿಂಗ್ ರೂಂನಲ್ಲಿ ಅವರ ಮುಂದೆ ಬಟ್ಟೆ ಬಿಚ್ಚಿಡುತ್ತೇನೆ!ಒಂದು ವೇಳೆ ಟೀಂ ಇಂಡಿಯಾ ಒಪ್ಪಲಿಲ್ಲ ಎಂದರೆ ಕ್ರೀಡಾಂಗಣದಲ್ಲೇ ಬಟ್ಟೆ ಬಿಚ್ಚಿ ಕುಣಿದಾಡಲು ನನಗೇನು ಮುಜುಗರವಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಯಾರು ಒಪ್ಪಲಿ ಬಿಡಲಿ ಪೂನಂ ಬಟ್ಟೆ ಬಿಚ್ಚುವುದು ಗ್ಯಾರಂಟಿಯಾಗಿದೆ!

  English summary
  Actress and Model Poonam Pandey decides to bare if Indian cricket team wins the World Cup. She says to media, "I'm a cricket fanatic and I'm a die hard supporter of my nation. India needs a lot of support and this is my way of supporting the team."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X