For Quick Alerts
  ALLOW NOTIFICATIONS  
  For Daily Alerts

  ಯೋಗರಾಜ್ ಭಟ್ಟರ ಡ್ರಾಮಾದಲ್ಲಿ ರೆಬಲ್ ಸ್ಟಾರ್

  By Rajendra
  |

  'ಪರಮಾತ್ಮ' ಚಿತ್ರದ ಬಳಿಕ ಯೋಗರಾಜ್ ಭಟ್ ಕೈಗೆತ್ತಿಕೊಂಡಿರುವ 'ಡ್ರಾಮಾ' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಯಶ್ ಮತ್ತು ರಾಧಿಕಾ ಪಂಡಿತ್ ಮುಖ್ಯಭೂಮಿಕೆಯಲ್ಲಿರುವ ಚಿತ್ರವನ್ನು 2012ರ ಮಧ್ಯಂತರದಲ್ಲಿ ತೆರೆಗೆ ತರಲು ಭಟ್ಟರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

  ಏತನ್ಮಧ್ಯೆ ಚಿತ್ರದಕ್ಕೆ ರೆಬಲ್ ಸ್ಟಾರ್ ಅಂಬರೀಷ್ ಅವರು ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅವರದು ಬಹಳ ಮುಖ್ಯವಾದ ಪಾತ್ರವಂತೆ. ಇತ್ತೀಚೆಗೆ ಅವರು ತಮ್ಮ ಎರಡು ದಿನಗಳ ಚಿತ್ರೀಕರಣವನ್ನು ಮೈಸೂರಿನಲ್ಲಿ ಮುಗಿಸಿಕೊಟ್ಟಿದ್ದಾರೆ. ಸದ್ಯಕ್ಕೆ ಅಂಬರೀಷ್ ಪಾತ್ರದ ಬಗೆಗಿನ ವಿವರಗಳನ್ನು ಭಟ್ಟರು ಗುಟ್ಟಾಗಿಟ್ಟಿದ್ದಾರೆ.

  ಇನ್ನು ಚಿತ್ರದ ಮುಖ್ಯಪಾತ್ರಧಾರಿಗಳಾದ ಯಶ್ ಮತ್ತು ರಾಧಿಕಾ ವಿಚಾರಕ್ಕೆ ಬಂದರೆ. ಇವರಿಬ್ಬರೂ ಈ ಹಿಂದೆ 'ಮೊಗ್ಗಿನ ಮನಸು' ಚಿತ್ರದಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಇವರಿಬ್ಬರೂ ಒಟ್ಟಿಗೆ ಅಭಿನಯಿಸುತ್ತಿರುವ ಮತ್ತೊಂದು ಚಿತ್ರ 'ಡ್ರಾಮಾ'. ಚಿತ್ರದಲ್ಲಿ ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಚೆನ್ನಾಗಿ ಮೂಡಿಬಂದಿ ಎಂಬ ಮಾತುಗಳು ಕೇಳಿಬರುತ್ತಿವೆ.

  ಪ್ರಕಾಶ್ ರೈ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಪೋಷಿಸುತ್ತಿದ್ದಾರೆ. 'ಮುಂಗಾರು ಮಳೆ'ಗೆ ಕ್ಯಾಮೆರಾ ಹಿಡಿದಿದ್ದ ಎಸ್ ಕೃಷ್ಣ ಛಾಯಾಗ್ರಹಣ 'ಡ್ರಾಮಾ' ಚಿತ್ರಕ್ಕಿದ್ದು ಜೊತೆಗೆ ವಿ ಹರಿಕೃಷ್ಣ ಸಂಗೀತ ಸಂಯೋಜನೆಯೂ ಇದೆ. (ಒನ್‌ಇಂಡಿಯಾ ಕನ್ನಡ)

  English summary
  Rebel Star Ambarish has joined director Yograj Bhat's dream project 'Drama'. Ambi played an important role in this film, in which Yash, Radhika Pandit in lead roles. Recently Ambarish has completed two days of shoot in Mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X