ಹೊಸ ಮುಖಗಳೊಂದಿಗೆ ಕಲಾ ಸಾಮ್ರಾಟ್ ದುಷ್ಟ
'ವೀರ ಪರಂಪರೆ' ಚಿತ್ರದ ಬಳಿಕ ಕಲಾ ಸಾಮ್ರಾಟ್ ಎಸ್ ನಾರಾಯಣ್ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ತಮ್ಮ ಚಿತ್ರಕ್ಕೆ 'ಚ'ಕಾರದ ಬಗೆಗಿನ ಮಮಕಾರವನ್ನು ಪಕ್ಕಕ್ಕಿಟ್ಟು 'ದುಷ್ಟ' ಎಂದು ಹೆಸರಿಟ್ಟಿದ್ದಾರೆ. ಚಿತ್ರದ ಟ್ಯಾಗ್ ಲೈನ್ 'ಬೇಲಿ ಮತ್ತು ಹೂ'.
ಈ ಬಾರಿ ಅವರು ಹೊಸಬರಿಗೆ ಮಣೆಹಾಕುತ್ತಿರುವುದು ವಿಶೇಷ. 'ದುಷ್ಟ' ಚಿತ್ರಕ್ಕಾಗಿ 22 ಮಂದಿ ರಂಗ ಕಲಾವಿದರನ್ನು ಪರಿಚಯಿಸಲು ನಾರಾಯಣ್ ಸಿದ್ಧತೆ ನಡೆಸಿದ್ದಾರೆ. ಜನವರಿ 3 ರಂದು ಚಿತ್ರ ಸೆಟ್ಟೇರಲಿದೆ. ಚಿತ್ರದ ಕತೆ ಯುವ ಹೃದಯಗಳನ್ನು ತಟ್ಟುವ ಪ್ರೇಮಕತೆ ಎನ್ನುತ್ತಾರೆ ನಾರಾಯಣ್.
ರಾಜ್ಯದಾದ್ಯಂತ ಸಂಚರಿಸಿ 22 ಕಲಾವಿದರನ್ನು ಆಯ್ಕೆ ಮಾಡಿದ್ದಾಗಿ ನಾರಾಯಣ್ ತಿಳಿಸಿದ್ದಾರೆ. ಸದ್ಯಕ್ಕೆ ಚಾಲ್ತಿಯಲ್ಲಿರುವ ಕನ್ನಡ ನಾಯಕ ನಟರು ಸಖತ್ ಬ್ಯುಸಿಯಾಗಿದ್ದಾರೆ. ಫೋನ್ ಮಾಡಿದರೂ ರಿಸೀವ್ ಮಾಡಲು ಆಗದಷ್ಟು ಬ್ಯುಸಿ. ಹಾಗಾಗಿ ಹಳಬರ ಸಹವಾಸವೇ ಬೇಡ ಎಂದು ಹೊಸಬರಿಗೆ ಮಣೆಹಾಕಿದ್ದಾಗಿ ನಾರಾಯಣ್ ತಿಳಿಸಿದ್ದಾರೆ.
ಕನ್ನಡ ಚಿತ್ರಗಳು : ನಿಮ್ಮ ಅಮೂಲ್ಯ ಮತ ಯಾರಿಗೆ?
'ದುಷ್ಟ'ನ ಬಹುತೇಕ ಚಿತ್ರೀಕರಣ ಶಿವಮೊಗ್ಗದಲ್ಲಿ ನಡೆಯಲಿದೆ. ಭದ್ರಾವತಿಯಲ್ಲಿ ಮುಹೂರ್ತ ನಡೆಯಲಿದೆ ಎಂದು ಚಿತ್ರದ ನಿರ್ದೇಶಕರು ವಿವರ ನೀಡಿದ್ದಾರೆ. ಈ ಚಿತ್ರಕ್ಕೆ ಸ್ವತಃ ನಾರಾಯಣ್ ಅವರೇ ಸಂಗೀತ ನಿರ್ದೇಶಕರು. ಛಾಯಾಗ್ರಹಣ ಜಗದೀಶ್ ವಾಲಿ, ಈ ಬಾರಿ ಕಲಾವಿದರ ಜೊತೆಗೆ ಹೊಸ ತಂತ್ರಜ್ಞರನ್ನು 'ದುಷ್ಟ'ನ ಮೂಲಕ ಪರಿಚಯಿಸಲಿದ್ದಾರೆ.


Click it and Unblock the Notifications











