»   » ಸೆಟ್ಟೇರಲಿದೆ ಕಲಾಸಾಮ್ರಾಟರ ಹೊಸ ಚಿತ್ರ

ಸೆಟ್ಟೇರಲಿದೆ ಕಲಾಸಾಮ್ರಾಟರ ಹೊಸ ಚಿತ್ರ

Subscribe to Filmibeat Kannada

ಕಥೆ, ಚಿತ್ರಕಥೆ, ಅದರೊಳಗಿನ ತಾರೆಗಳು, ತೆರೆಯ ಹಿಂದೆ ಮುಂದಿನ, ಅಕ್ಕಪಕ್ಕದ ಕಲಾವಿದರು, ತಂತ್ರಜ್ಞರ ಬಗ್ಗೆ ಕಿಂಚಿತ್ತೂ ಗುಟ್ಟು ಬಿಟ್ಟುಕೊಡದೆ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸಿನಿಮಾ ಒಂದನ್ನು ಕೈಗೆತ್ತಿಕೊಂಡಿದ್ದಾರೆ.

ಎಸ್.ನಾರಾಯಣ್ ನಿರ್ದೇಶನದ 'ಚೆಲುವಿನ ಚಿತ್ತಾರ', 'ಚಂಡ' ಚಿತ್ರಗಳು ಯಶಸ್ವಿಯಾದ ನಂತರ ಸ್ವಲ್ಪ ಗ್ಯಾಪ್ ತಗೊಂಡು ಹೊಸ ಕಥೆಯನ್ನು ನಿರ್ದೇಶಿಸಲು ಅಣಿಯಾಗಿದ್ದಾರೆ. ನಾರಾಯಣ್ ಅವರ ನಿಕಟವರ್ತಿಗಳು ಹೇಳುವ ಪ್ರಕಾರ, ಕನ್ನಡದವರು ಬೇಡ ಅಂತಲೋ ಏನೋ ಹಿನ್ನಲೆ ಗಾಯಕಿಯರನ್ನು ಅರಸುತ್ತಾ ದೂರದ ಮುಂಬೈಗೆ ಹೋಗಿದ್ದಾರಂತೆ. ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಿದ ಬಳಿಕವಷ್ಟೆ ಚಿತ್ರಕಥೆಯನ್ನು ಹೆಣೆಯಲಿದ್ದಾರಂತೆ. ಅದೂ ಚಿತ್ರಕಥೆ, ಸಂಭಾಷಣೆಯನ್ನು ಸಂಗೀತ ನಿರ್ದೇಶಕರ ಪಕ್ಕದಲ್ಲೇ ಕುಳಿತು ರಚಿಸುವ ಇರಾದೆ ನಾರಾಯಣ್‌ರಿಗೆ ಇದೆಯಂತೆ.

ಬಲ್ಲ ಮೂಲಗಳ ಪ್ರಕಾರ 'ಚೆಲುವಿನ ಚಿತ್ತಾರ'ದಲ್ಲಿ ಚೆಲ್ಲುಚೆಲ್ಲಾಗಿ ನಟಿಸಿದ್ದ ಅಮೂಲ್ಯ ಅವರು ನಾರಾಯಣ್‌ರ ಹೊಸಚಿತ್ರದ ನಾಯಕಿಯಂತೆ. ಚಿತ್ರದ ನಾಯಕ ಯಾರು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲವಂತೆ. ಚೆಲುವಿನ ಚಿತ್ತಾರದ ನಂತರ ಅಮೂಲ್ಯ ಓದಿನ ಕಡೆಗೆ ಗಮನಕೊಟ್ಟ ಕಾರಣ ಯಾವುದೇ ಚಿತ್ರದಲ್ಲಿ ನಟಿಸಲು ಒಪ್ಪಿರಲಿಲ್ಲ. ಪ್ರಸ್ತುತ ಒಂಬತ್ತನೇ ತರಗತಿ ಓದುತ್ತಿರುವ ಅಮೂಲ್ಯ ಮುಂದಿನ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. ಎರಡು ತಿಂಗಳ ಕಾಲ ಬೇಸಿಗೆ ರಜೆ ಸಿಗುವ ಕಾರಣ ನಾರಾಯಣ್ ಚಿತ್ರದಲ್ಲಿ ನಟಿಸಲು ಅಮೂಲ್ಯ ಒಪ್ಪಿದ್ದಾರೆ.

ತಾಂತ್ರಿಕ ಬಳಗದ ಬಗ್ಗೆ ನಾರಾಯಣ್ ಇನ್ನೂ ತಲೆಕೆಡಿಸಿಕೊಂಡಿಲ್ಲ. ಆದರೂ ಛಾಯಾಗ್ರಾಹಕ್ಕೆ ಜಗದೀಶ್ ವಾಲಿ ಮತ್ತು ಸಂಕಲನಕ್ಕೆ ಸೌಂದರ ರಾಜನ್ ಅವರನ್ನು ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ನೆರೆರಾಜ್ಯದಲ್ಲಿ ಬೇರುಬಿಟ್ಟಿರುವ ಕನ್ನಡತಿಯರು : ನಿತ್ಯಾ, ಅಕ್ಷರ, ರಮ್ಯಾ, ಸಿಂಧು ಮೆನನ್, ರಾಧಿಕಾ, ಸಂಜನಾ
ಪಕ್ಕದೂರಿನಿಂದ ಆಮದಾಗಿರುವ ಸುಂದರಾಂಗಿನಿಯರು : ಜೆನಿಲಿಯಾ, ಮಮತಾ ಮೋಹನದಾಸ್, ನಮಿತಾ, ಮಧುಮಿತಾ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada