»   » ಸಿದ್ದಗಂಗ ಶ್ರೀಶಿವಕುಮಾರ ಸ್ವಾಮೀಜಿಗೆ ಸಿನಿ ನಮನ

ಸಿದ್ದಗಂಗ ಶ್ರೀಶಿವಕುಮಾರ ಸ್ವಾಮೀಜಿಗೆ ಸಿನಿ ನಮನ

Subscribe to Filmibeat Kannada

700ವರ್ಷಗಳಿಗೂ ಮೀರಿದ ಇತಿಹಾಸವಿರುವ ಸಿದ್ದಗಂಗ ಕ್ಷೇತ್ರ ಪರಿಚಯ ಹಾಗೂ ಶತಾಯುಷಿ ಶ್ರೀ ಶಿವಕುಮಾರ ಸ್ವಾಮಿಗಳ ವ್ಯಕ್ತಿ ಪರಿಚಯವೂ ಆಗಿರುವ 'ಜ್ಞಾನಜ್ಯೋತಿ ಶ್ರೀ ಸಿದ್ದಗಂಗ ' ಚಿತ್ರಕ್ಕೆ ಪ್ರಥಮಪ್ರತಿ ಸಿದ್ದವಾಗಿದೆ ಎಂದು ನಿರ್ಮಾಪಕ ಮಹಂತಪ್ಪ ಅವರು ತಿಳಿಸಿದ್ದಾರೆ.

ಶ್ರೀ ಶಿವಕುಮಾರ ಸ್ವಾಮಿಗಳು, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಹಾಗೂ ಡಾ:ವಿಷ್ಣುವರ್ಧನ್ ದಂಪತಿಗಳ ಅಭಿನಯವಿರುವ ಈ ಚಿತ್ರವನ್ನು ಓಂಕಾರ್.ಬಿ.ಎ ಅವರು ಕಥೆ, ಚಿತ್ರಕಥೆ ಬರೆಯುವುದರೊಂದಿಗೆ ನಿರ್ದೇಶಿಸಿದ್ದಾರೆ. ಶಿವಗಂಗೆ, ಸಿದ್ದಗಂಗೆಯ ಸುಂದರ ಪರಿಸರವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಛಾಯಾಗ್ರಾಹಕ ಪಿ ಕೆ ಎಚ್ ದಾಸ್. ಸಿದ್ದಗಂಗ ಮಠದಲ್ಲಿ ಆಶ್ರಯ ಪಡೆದಿರುವ 13,000ಕ್ಕೂ ಹೆಚ್ಚು ಮಕ್ಕಳು ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ. ಉಳಿದಂತೆ ಯುವರಾಜ್ ಸಂಗೀತ, ಜಿ.ಮೂರ್ತಿ ಕಲೆಯಿರುವ ಚಿತ್ರದ ತಾರಾಬಳಗದಲ್ಲಿ ಶ್ರೀಧರ್, ಶ್ರೀನಿವಾಸಮೂರ್ತಿ, ವಿನಯಾಪ್ರಕಾಶ್, ಚೇತನ್, ಶಿವಧ್ವಜ್, ರಮೇಶ್‌ಭಟ್, ಸುಚೇಂದ್ರ ಪ್ರಸಾದ್, ಜಿ.ಕೆ.ಗೋವಿಂದರಾವ್, ಸುಂದರರಾಜ್, ತಾರಾ ಹಾಗೂ ಮಾ:ಕಿಶನ್ ಇದ್ದಾರೆ.
(ದಟ್ಸ್ ಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada