»   » ಸುದೀಪ್‌ ದ್ವಿಪಾತ್ರದ ಮತ್ತೊಂದು ಚಿತ್ರ 'ವೀರ ಮದಕರಿ'

ಸುದೀಪ್‌ ದ್ವಿಪಾತ್ರದ ಮತ್ತೊಂದು ಚಿತ್ರ 'ವೀರ ಮದಕರಿ'

Subscribe to Filmibeat Kannada

ನಾಲ್ಕು ವರ್ಷಗಳ ಸುದೀರ್ಘ ಗ್ಯಾಪ್‌ನ ನಂತರ ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಹೊಸ ಚಿತ್ರ 'ವೀರ ಮದಕರಿ'. ದಿನೇಶ್ ಗಾಂಧಿ ನಿರ್ದೇಶಿಸುತ್ತಿರುವ ಪ್ರಥಮ ಚಿತ್ರಕ್ಕೆ ಸುರೇಶ್ ರಾಜ್ ನಿರ್ಮಾಪಕ. ಈ ಹಿಂದೆ 'ವಾಲಿ' ಚಿತ್ರದಲ್ಲಿ ಸುದೀಪ್ ಅವಳಿ ಸಹೋದರರ ಪಾತ್ರದಲ್ಲಿ ನಟಿಸಿದ್ದರು.

ನಿರ್ದೇಶಕ ದಿನೇಶ್ ಗಾಂಧಿ ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿದ್ದಾರೆ. ''ಈ ಚಿತ್ರ ತುಂಬಾ ತಾಂತ್ರಿಕ ಶ್ರೀಮಂತಿಕೆಯಿಂದ ಕೂಡಿರುತ್ತದೆ. ಅದಕ್ಕಾಗಿ ಚಿತ್ರೋದ್ಯಮದ ಉತ್ತಮ ತಂತ್ರಜ್ಞರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ತೀರಾ ಇತ್ತೀಚೆಗಿನ ತಂತ್ರಜ್ಞಾನವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಅರ್ಧದಷ್ಟು ಚಿತ್ರವನ್ನು ಒಳಾಂಗಣದಲ್ಲಿ ಚಿತ್ರೀಕರಿಸಲು ನಿರ್ಧರಿಸಿದ್ದೇವೆ. ತಂತ್ರಜ್ಞಾನದ ಮೂಲಕ ಹಿನ್ನಲೆ ದೃಶ್ಯಗಳಿಗೆ ಬಣ್ಣ ತುಂಬಲಿದ್ದೇವೆ. ಎಲ್ಲವನ್ನೂ ಹೊರಾಂಗಣದಲ್ಲಿ ಚಿತೀಕರಿಸಿದರೆ ಉತ್ತಮ ಚಿತ್ರವನ್ನು ಮಾಡಲು ಸಾಧ್ಯವಿಲ್ಲ.ಹಾಗಾಗಿ ಒಳಾಂಗಣ ಚಿತ್ರಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದೇವೆ. ನಟ ಸುದೀಪ್ ಅವರೊಂದಿಗೆ ಚಿತ್ರ ಮಾಡಬೇಕು ಎನ್ನುವುದು ನನ್ನ ಕನಸು ನೆರವೇರುತ್ತಿದೆ ''ಎನ್ನುತ್ತಾರೆ ದಿನೇಶ್.

ತಮ್ಮ ಪಾತ್ರದ ಬಗ್ಗೆ ತುಂಬಾ ಖುಷಿಯಲ್ಲಿದ್ದ ಸುದೀಪ್, ''ಮೂರು ತಿಂಗಳ ಹಿಂದೆ ದಿನೇಶ್ ತಮ್ಮ ಚಿತ್ರಕಥೆಯನ್ನು ಓದಿದಾಗ ಕಥೆ ಕೇಳಿ ನನಗೆ ತುಂಬ ಇಷ್ಟವಾಯಿತು. ಕಳೆದ ಮೂರು ತಿಂಗಳಿಂದ ವೀರ ಮದಕರಿಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ. ಈ ಚಿತ್ರ ತೀರಾ ವಿಭಿನ್ನವಾಗಿರುತ್ತದೆ. ಹೊಸತನದ ಚಿತ್ರಗಳನ್ನು ಬಯಸುವ ಪ್ರೇಕ್ಷಕರು ಖಂಡಿತ ಈ ಚಿತ್ರವನ್ನು ಇಷ್ಟಪಡುತ್ತಾರೆ. 2008ರ ವರ್ಷಾಂತ್ಯಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದೇಶಕರು ಯೋಜಿಸಿದ್ದಾರೆ. ಬಾಲಿವುಡ್ ನಿರ್ದೇಶಕ ರಾಮ್‌ಗೋಪಾಲ್ ವರ್ಮಾರ 'ಫೂಂಕ್' ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ'' ಎಂದರು.

ವೀರ ಮದಕರಿ ಚಿತ್ರಕಥೆ ಏನು ಎಂದು ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ಬಾಯಿ ಬಿಡಲಿಲ್ಲ. ಪೊಲೀಸ್ ಗೆಟಪ್‌ನಲ್ಲಿರುವ ಸುದೀಪ್‌ರ ಚಿತ್ರ ನೋಡಿದರೆ ಇದು ಮತ್ತೊಂದು ಪೊಲೀಸ್ ಸ್ಟೋರಿ ಎನಿಸುತ್ತದೆ. ಹಾಗಾಗದೆ ಹೊಸತನದ ಚಿತ್ರ ಸುದೀಪ್ ಅವರಿಂದ ಬರಲಿ ಎನ್ನುವುದು ಅಭಿಮಾನಿಗಳ ಒತ್ತಾಸೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada