ಮೂಡಲ ಮನೆಯಲ್ಲೀಗ ನೀರವ ಮೌನ

By Rajendra

Vaishali Kasaravalli
ಬಾಳ ಬದುಕಿನ ಪಯಣ ಮುಗಿಸಿದ ಹಿರಿಯ ನಟಿ, ರಂಗಭೂಮಿ ಕಲಾವಿದೆ ವೈಶಾಲಿ ಕಾಸರವಳ್ಳಿ ಅವರ ಅಂತ್ಯಕ್ರಿಯೆ ಇಂದು ಬನಶಂಕರಿ ಚಿತಾಗಾರದಲ್ಲಿ ನೆರವೇರಿತು. ಪಂಚ ಭೂತಗಳಲ್ಲಿ ಮುತ್ತಿನ ತೋರಣ ಲೀನವಾಯಿತು. ಮೂಡಲ ಮನೆಯಲ್ಲೀಗ ನೀರವ ಮೌನ.

ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ವೈಶಾಲಿ ಅವರ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಟ್ರಾಫಿಕ್ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಬನಶಂಕರಿ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿತ್ತು. ಅಂತ್ಯಕ್ರಿಯೆಗೂ ಮುನ್ನ ಮಧ್ಯಾಹ್ನ 12 ಗಂಟೆಯಿಂದ ಸಂಜೆ 3 ಗಂಟೆಯವರೆಗೂ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ವೈಶಾಲಿ ಅವರ ಭೌತಿಕ ಕಾಯವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ಚಲನಚಿತ್ರವನ್ನು ನಿರ್ದೇಶಿಸಬೇಕು ಎಂದು ಅಪಾರ ತುಡಿತ ಹೊಂದಿದ್ದ ವೈಶಾಲಿ ಅವರು ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರ 'ನಿರಾಕರಣ' ಕಾದಂಬರಿಯನ್ನು ತೆರೆಗೆ ತರುವ ಸನ್ನಾಹದಲ್ಲಿದ್ದರು. ಆದರೆ ಕನಸು ನನಸಾಗುವ ಮುನ್ನವೇ ಅವರು ಚಿರನಿದ್ರೆಗೆ ಜಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X