twitter
    For Quick Alerts
    ALLOW NOTIFICATIONS  
    For Daily Alerts

    ನಾರಿಯ ಸೀರೆ ಕದ್ದ ಬೆಡಗಿ ನಿಕಿತಾ ತುಕ್ರಲ್‌ಗೆ ಕಂಕಣಭಾಗ್ಯ

    By Rajendra
    |

    ದಕ್ಷಿಣ ಚಿತ್ರರಂಗದ ತಾರೆ ನಿಕಿತಾಗೆ ಈಗಾಗಲೆ ದರ್ಶನ್ ಜತೆ ಮದುವೆಯಾಗಿದೆ ಎಂಬ ಗಾಳಿಸುದ್ದಿ ಕೆಲದಿನಗಳ ಹಿಂದೆ ಗಾಂಧಿನಗರದಲ್ಲಿ ಸ್ಫೋಟಗೊಂಡಿತ್ತು. ಅಯ್ಯೋ ಇದೆಲ್ಲಾ ಯಾರೋ ಮಾಡಿದ ಕಿತಾಪತಿ ಎಂದು ದರ್ಶನ್ ಹೇಳಿ ಕೈತೊಳೆದುಕೊಂಡಿದ್ದರು. ಈಗ ಸ್ವತಃ ನಿಕಿತಾ ಅವರೇ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ.

    ಇತ್ತೀಚೆಗೆ ನಡೆದ'ಗನ್' ಚಿತ್ರದ ಪೂರ್ವಭಾವಿ ಪ್ರದರ್ಶನದಲ್ಲಿ ಅದೂ ಇದೂ ಮಾತನಾಡುತ್ತಾ ತಮ್ಮ ಮದುವೆ ಯಾವಾಗ ಎಂಬ ಪತ್ರಕರ್ತರ ಪ್ರಶ್ನೆಗೆ ನಿಕಿತಾ ಪುಳಕಗೊಂಡಿದ್ದರು. ಇನ್ನು ತಡ ಮಾಡಿ ಪ್ರಯೋಜನವಿಲ್ಲ. ಈ ವರ್ಷವೇ ಮದುವೆ ಆಗಬೇಕೆಂದು ನಿರ್ಧರಿಸಿರುವುದಾಗಿ ನಿಕಿತಾ ಖಚಿತ ಉತ್ತರ ನೀಡಿದ್ದಾರೆ. ನಿಕಿತಾ ಅವರ ತಂದೆ ದಿಢೀರ್ ಅಂತ ಕಣ್ಮುಚ್ಚಿದ ಕಾರಣ ಮದುವೆ ಮುಂದೂಡಲಾಗಿತ್ತಂತೆ.

    ಇನ್ನೂ ಸೂಕ್ತ ವರ ಸಿಕ್ಕಿಲ್ಲವಂತೆ. ಈ ವರ್ಷ ಹೇಗಾದರೂ ಮಾಡಿ ತನ್ನ ರಾಜಕುಮಾರನನ್ನು ಹುಡುಕುವುದಾಗಿ ನಿಕಿತಾ ತಿಳಿಸಿದ್ದಾರೆ. ಅಂದಹಾಗೆ ದರ್ಶನ್ ಜತೆ ನಿಕಿತಾ ಮೂರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವು ಯೋಧ, ಪ್ರಿನ್ಸ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಯೋಧ ಹೊರತುಪಡಿಸಿದರೆ ಇನ್ನೆರಡು ಚಿತ್ರಗಳು ನಿರ್ಮಾಣ ಹಂತದಲ್ಲಿವೆ.

    English summary
    South India actress Nikitha Thukral is getting married in the year 2011. She disclosed her marriage details at the ‘Gun’ premier show held in Bangalore. Nikitha has acted in Kannada movies Yodha, Vamshi, Belgaum, Gun , Prince, Kranthiveera Sangolli Rayanna, Hanebaraha, Naariya Seere Kadda etc.
    Monday, February 28, 2011, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X