ಪುನೀತ್ ಜೊತೆ ಯೋಗರಾಜ್ ಭಟ್ಟರ ಪರಮಾತ್ಮ

By Rajendra

ಕಡೆಗೂ ಯೋಗರಾಜ್ ಭಟ್ ತಮ್ಮ ಹೊಸ ಚಿತ್ರಕ್ಕೆ ಸೂಕ್ತ ಶೀರ್ಷಿಕೆ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಅದೇನು ಅಂತಿರಾ? ಚಿತ್ರದ ಹೆಸರು 'ಪರಮಾತ್ಮ'. ಅವರವರ ಭಾವಕ್ಕೆ ಭಕುತಿಗೆ ತಕ್ಕಂತೆ 'ಪರಮಾತ್ಮ' ಪದದ ಅರ್ಥವನ್ನು ಊಹಿಸಿಕೊಳ್ಳಬಹುದು. ಹೊಸ ವರ್ಷದ ಗುಂಗಿನಲ್ಲಿರುವ ಪಾನಪ್ರಿಯರಿಗೆ 'ಪರಮಾತ್ಮ' ಎಂದರೆ ಏನು ಎಂದು ಥಟ್ಟನೆ ಹೊಳೆಯುತ್ತದೆ.

ಅಂದಹಾಗೆ 'ಪರಮಾತ್ಮ' ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ನಾಯಕ ನಟ. ಈ ಚಿತ್ರವನ್ನು ವಿತರಕ ಜಯಣ್ಣ ನಿರ್ಮಿಸಲಿದ್ದಾರೆ. ಯೋಗರಾಜ್ ಭಟ್ ಮತ್ತು ಪುನೀತ್ ಎಂದರೆ ಭಾರಿ ಬಜೆಟ್ ಚಿತ್ರ ಎಂಬ ಲೆಕ್ಕಾಚಾರ. ಅದಕ್ಕೆ ತಕ್ಕಂತೆ ಪರಮಾತ್ಮನಿಗೆ ಜಯಣ್ಣ ತಯಾರಿ ನಡೆಸಿದ್ದಾರೆ. ಸಂಕ್ರಾಂತಿ ಹೊತ್ತಿಗೆ ಚಿತ್ರ ಸೆಟ್ಟೇರಲಿದೆ. ಸದ್ಯಕ್ಕೆ ಯೋಗರಾಜ್ ಭಟ್ ಚಿತ್ರ ಕತೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಕನ್ನಡ ಚಿತ್ರಗಳು : ನಿಮ್ಮ ಅಮೂಲ್ಯ ಮತ ಯಾರಿಗೆ?

ಚಿತ್ರದ ನಾಯಕಿ ಸೇರಿದಂತೆ ಉಳಿದ ಪಾತ್ರಗಳ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಈ ಬಾರಿ ಭಟ್ಟರು ಸಂಗೀತ ನಿರ್ದೇಶನಕ್ಕೆ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಹಾಗೆ ಉಳಿದಿದೆ. ತಂತ್ರಜ್ಞರ ಆಯ್ಕೆಯಲ್ಲಿ ಬಹಳ ಚೂಸಿಯಾಗಿರುವ ಭಟ್ಟರು ಯಾರ‌್ಯಾರಿಗೆ ಮಣೆ ಹಾಕಲಿದ್ದಾರೆ ಎಂಬುದನ್ನು ನೋಡಬೇಕು. ಸದ್ಯಕ್ಕೆ 'ಹುಡುಗ್ರು' ಚಿತ್ರದಲ್ಲಿ ಪುನೀತ್ ಬ್ಯುಸಿಯಾಗಿದ್ದಾರೆ. [ಪುನೀತ್ ರಾಜ್ ಕುಮಾರ್]

More from Filmibeat

English summary
Kannada films successful director Yograj Bhat new flick titles as Paramathma. Power Star Puneet Rajkumar plays lead role. The female lead and other cast and crew yet to be finalised. Film distributor Jayanna is the producer of the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X