»   » ಯೋಗರಾಜ್ ಭಟ್-ಯಶ್ ಸೇರಿ ಮಾಡ್ತಾರೆ 'ಡ್ರಾಮಾ'

ಯೋಗರಾಜ್ ಭಟ್-ಯಶ್ ಸೇರಿ ಮಾಡ್ತಾರೆ 'ಡ್ರಾಮಾ'

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಂದಾಗಿದ್ದಾರೆ. ಇವರಿಬ್ಬರ ಸಂಗಮದಲ್ಲಿ ಸಿನಿಮಾವೊಂದು ಸೆಟ್ಟೇರುತ್ತಿದೆ. ಸಿನಿಮಾ ಹಸರೇ 'ಡ್ರಾಮಾ'. ಅಡಿಬರಹ "ಇನ್ನೂ ಈ ಕಣ್ ನಲ್ಲಿ ಏನೇನ್ ನೋಡ್ಬೇಕಪ್ಪಾ?!." ನಿರ್ದೇಶಕರಾಗಿ ಈ ಡ್ರಾಮಾ ಆಡಿಸುವವರು .ಪರಮಾತ್ಮ. ಯೋಗರಾಜ್ ಭಟ್.

ಈ ಡ್ರಾಮಾ ಪಾತ್ರಧಾರಿಗಳು ನಟ ಯಶ್, ನೀನಾಸಂ ಸತೀಶ್, ಭಾಮಾ ಹಾಗೂ ಪ್ರಜ್ಞಾ. ಚಿತ್ರ ನಿರ್ಮಾಣ ಮಾಡುತ್ತಿರುವವರು ಪರಮಾತ್ಮ ಚಿತ್ರ ನಿರ್ಮಾಪಕ ಜಯಣ್ಣ. ಸಂಗೀತ ನೀಡುತ್ತಿದ್ದಾರೆ, ವಿ. ಹರಿಕೃಷ್ಣ. ಕ್ಯಾಮರಾದಲ್ಲಿ ಕೈಚಳಕ ತೋರಿಸಲಿದ್ದಾರೆ ಕೃಷ್ಣ. ಮಿಕ್ಕ ಡೀಟೇಲ್ಸ್ ಸದ್ಯದಲ್ಲೇ ಹೊರಬೀಳಲಿದೆ.

ಈಗಾಗಲೇ ಭಟ್ಟರು ಅನಂತ್ ನಾಗ್, ಟಬು ಜೋಡಿಯ ಚಿತ್ರವೊಂದರ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಾಗಿದೆ. ಕೇಳಿದವರಿಗೆಲ್ಲ ಇಲ್ಲ ಅನ್ನದೇ ಹಾಡು ಬರೆದುಕೊಟ್ಟು ಖುಷಿ ಪಡಿಸುತ್ತಿರುವುದು ಮಾಮೂಲು. ಪರಮಾತ್ಮ ನಂತರ ಭಟ್ಟರು ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದು ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಲಿದೆ. (ಒನ್ ಇಂಡಿಯಾ ಕನ್ನಡ)

English summary
Director Yograj Bhat directing new movie 'Drama'. Rocking Star Yash, Bhama, Pragna and Neenasam Satish are in the movie. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada